ಗ್ರಾಮದ ರಸ್ತೆಗಳ ರಿಪೇರಿಗೆ ಕ್ರಮ

18 ALVANDI 01
ಅಳವಂಡಿ ಗ್ರಾಪಂನಲ್ಲಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಶಾರವ್ವ, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ ಇತರರಿದ್ದರು.
Published on

ಅಳವಂಡಿ: ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ಜಾತ್ರೆಯು ಫೆ.9 ರಂದು ಜರುಗಲಿದ್ದು, ಬರುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಪಿಡಿಒ ಕೊಟ್ರಪ್ಪ ಅಂಗಡಿ ತಿಳಿಸಿದರು.

ಗ್ರಾಪಂನಲ್ಲಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಹೆಚ್ಚುವರಿ ಬೀದಿದೀಪ ಅಳವಡಿಸುವುದು. ಜಾತ್ರೆ ಆಚರಿಸುವ ಮುಖ್ಯ ರಸ್ತೆ, ಬನ್ನಿಕಟ್ಟಿ, ಮದ್ದು ಸುಡುವ ಸ್ಥಳ, ಚಿಕ್ಕ ಅಗಸಿ, ಜಕ್ಕಮ್ಮನಬಾವಿ ಹತ್ತಿರ ಹಾಗೂ ಚರಂಡಿ ಸ್ವಚ್ಛಗೊಳಿಸಲಾಗುವುದು ಎಂದರು.

ಸೋಲಾರ್ ವಿದ್ಯುತ್ ಘಟಕಕ್ಕೆ ಸಾಮಗ್ರಿಗಳನ್ನು ಹೊತ್ತ ಲಾರಿಗಳು ಗ್ರಾಮದ ರಸ್ತೆಯಲ್ಲಿ ಸಂಚರಿಸುವುದರಿಂದ ರಸ್ತೆಗಳು ಹದಗೆಟ್ಟಿದ್ದು, ಕಂಪನಿಗೆ ರಸ್ತೆ ದುರಸ್ತಿ ಮಾಡುವಂತೆ ಸೂಚಿಸಲು ಚರ್ಚಿಸಲಾಯಿತು. ಭೋವಿ ಸಮಾಜದ ಸಮುದಾಯ ಭವನ ಅಭಿವೃದ್ಧಿ, ಎನ್‌ಎ ಪ್ಲಾಟ್ ಸ್ಥಳದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಯಿತು ಹಾಗೂ ಬೇಸಿಗೆ ಆಗಮಿಸುತ್ತಿದ್ದು, ಎರಡು ಹೆಚ್ಚುವರಿ ಬೋರ್‌ವೆಲ್ ಮೋಟರ್‌ಗಳನ್ನು ತರಿಸುವ ಬಗ್ಗೆ ಮತ್ತು ವಿವಿಧ ವಿಷಯಗಳ ಕುರಿತು ಒಪ್ಪಿಗೆ ಸೂಚಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಶಾರವ್ವ ಈಳಿಗೇರ, ಕಾರ್ಯದರ್ಶಿ ಬಸವರಾಜ, ಸದಸ್ಯರಾದ ಭಾರತಿ ಬೆಣಕಲ್, ಗೌಸಬೀ ತಟಗಾರ, ರೇಣುಕಾ ರಡ್ಡಿ, ಸುವರ್ಣ ಅರಳೆಲೆಮಠ, ಶಶಿಕಲಾ ನಾಗರಳ್ಳಿ, ಮೀನಾಕ್ಷಿ, ಗುರುಬಸವರಾಜ ಹಳ್ಳಿಕೇರಿ, ಹನುಮಂತ ಮೋರನಾಳ, ಹನುಮಂತ ಮೂಲಿಮನಿ, ಪ್ರಶಾಂತಗೌಡ ಪಾಟೀಲ, ಗವಿಸಿದ್ದಪ್ಪ, ನಾಗರಾಜ ನವನಳ್ಳಿ, ವಿಶ್ವನಾಥ ದೋತರಗಾವಿ, ರೇಣುಕಪ್ಪ ಹಳ್ಳಿಕೇರಿ, ಮಂಜುನಾಥ ಬೆದವಟ್ಟಿ ಸಿಬ್ಬಂದಿ ಶಿವಮೂರ್ತಿ, ದೇವೇಂದ್ರರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net