

ಎಂ.ಕೆ.ಹುಬ್ಬಳ್ಳಿ: ಚನ್ನಮ್ಮನ ಕಿತ್ತೂರು ತಾಲೂಕಿನ ಹಳೇ ವೀರಾಪುರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಕುರಿತಾಗಿ ಏ.17ರಂದು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಜೀವನದಿ ಮಲಪ್ರಭಾ ಒಡಲಿಗೆ ಕನ್ನ! ಶೀರ್ಷಿಕೆಯಡಿ ಪ್ರಕಟಿಸಿದ್ದ ವರದಿಗೆ ಎಚ್ಚೆತ್ತು ಅಧಿಕಾರಿಗಳು ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ವರದಿ ಗಮನಿಸಿ ಅಕ್ರಮ ಮರಳು ಸಾಗಣೆ ಸ್ಥಳಕ್ಕಾಗಮಿಸಿದ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಪಾರ ಪ್ರಮಾಣದ ಮರಳು ಲೂಟಿಯಾಗಿರುವುದನ್ನು ಗಮನಿಸಿದ್ದಾರೆ. ಅಕ್ರಮ ಮರಳು ಸಾಗಿಸುವ ದಂಧೆಕೋರರನ್ನು ಪತ್ತೆಹಚ್ಚಿ ಅವರ ಮೇಲೆ ಕಾನೂನು ಕ್ರಮಕೆಗೊಳ್ಳುವ ಜತೆಗೆ ಮರಳು ಸಾಗಿಸಲು ವಾಹನಗಳಿಗೆ ಅನುವು ಮಾಡಿಕೊಟ್ಟವರಿಗೂ ನೋಟಿಸ್ ನೀಡುವುದಾಗಿ ತಹಸೀಲ್ದಾರ್ ರವೀಂದ್ರ ಹಾದಿಮನಿ ತಿಳಿಸಿದ್ದಾರೆ. ಮುಂ
ದೆ ಇಂತಹ ಅಕ್ರಮ ಮರಳು ದಂಧೆ ನಡೆಯದಂತೆ ಅಗತ್ಯ ಕ್ರಮಕೆಗೊಂಡು ನಿಗಾವಹಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದಾರೆ. ಅಕ್ರಮ ಮರಳು ದಂಧೆ ತಡೆಗೆ ಅಗತ್ಯ ಕ್ರಮ ಕೆಗೊಳ್ಳುತ್ತೇವೆ. ಯಾರೇ ಅಕ್ರಮ ಮರಳು ದಂಧೆ ನಡೆಸಿದರೂ ಅಂಥವರ ವಿರುದ್ಧ ಕಾನೂನು ಕ್ರಮಕೆಗೊಳ್ಳುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ರಿಜ್ವಾನ್ ಎಂ.ಎಸ್. ಮಾಹಿತಿ ನೀಡಿದ್ದಾರೆ.
ಕಂದಾಯ ನಿರೀಕ ಎಂ.ಎಂ.ನಿರಲಗಿ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಕೊಂಡಿಕೊಪ್ಪ, ರವಿ ಯಲ್ಲಗೌಡ್ರ, ಕಂದಾಯ ಇಲಾಖೆ ನೌಕರ ಸಂತೋಷ ಮೂಗಬಸವ, ಕಿತ್ತೂರು ಪೊಲೀಸ್ ಠಾಣೆ ಎಎಸ್ಐ ಆರ್.ಕೆ.ಗೆಜೇರಿ, ರಾಜು ಗೌರಕ್ಕನವರ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.