ಬಿ.ಗಣೇಕಲ್ ಪಿಡಿಒ ವಿರುದ್ಧ ಕ್ರಮವಹಿಸಿ

dvd manavi
ದೇವದುರ್ಗದಲ್ಲಿ ಇಒ ಬಸವರಾಜ ಹಟ್ಟಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಪ್ರಮುಖರಾದ ಶಿವರಾಯ ಅಕ್ಕರಕಿ, ಎಂ.ಆರ್.ಭೇರಿ, ಮಾನಪ್ಪ ಮೇಸ್ತ್ರಿ, ಯಲ್ಲಪ್ಪ ಆಲ್ದರ್ತಿ, ಅರ್ಜುನ್ ಕೊಪ್ಪರ, ಶಾಂತಕುಮಾರ್ ಹೊನ್ನಟಗಿ ಇತರರಿದ್ದರು.
Published on

ದೇವದುರ್ಗ: ಊರಿನ ಸಮಸ್ಯೆಗಳ ಬಗ್ಗೆ ಕೇಳಿದ ಯುವಕ ಮೇಲೆ ಹಲ್ಲೆ ನಡೆಸಿದ ಬಿ.ಗಣೇಕಲ್ ಗ್ರಾಪಂ ಪಿಡಿಒ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಾಪಂ ಇಒ ಬಸವರಾಜ ಹಟ್ಟಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಸಲ್ಲಿಸಿತು.

ಮಳೆಗಾಲ ಆರಂಭವಾಗಿದ್ದು, ಬಿ.ಗಣೇಕಲ್ ಗ್ರಾಮದಲ್ಲಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಪರಿಹಾರಕ್ಕೆ ಪಿಡಿಒ ಶಿವರಾಜಗೆ ಗ್ರಾಮಸ್ಥರ ಪರವಾಗಿ ಕಾಶಿನಾಥ ಕೋರಿ ಮನವಿ ಮಾಡಿದ್ದಾರೆ. ಇದಕ್ಕೆ ಪಿಡಿಒ ಸ್ಪಂದಿಸದ ಕಾರಣ, ತಾಪಂ ಇಒಗೆ ಕಾಶಿನಾಥ ದೂರು ಸಲ್ಲಿಸಿದ್ದಾರೆ. ಇದನ್ನೇ ನೆಪಮಾಡಿಕೊಂಡ ಪಿಡಿಒ ಶಿವರಾಜ, ಪಟ್ಟಣಕ್ಕೆ ಕಾಶಿನಾಥ ಬಂದಿದ್ದ ವೇಳೆ ಅಶ್ಲೀಲವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಗ್ರಾಮದ ಯುವಕನ ಮೇಲೆ ಹಲ್ಲೆ ಮಾಡಿದ ಪಿಡಿಒ ವಿರುದ್ಧ ಕ್ರಮ ವಹಿಸಬೇಕು. ಎಫ್‌ಐಆರ್ ಆಧಾರದ ಮೇಲೆ ಅಮಾನತಿಗೆ ಶಿಫಾರಸು ಮಾಡಬೇಕು. ಗ್ರಾಪಂನಲ್ಲಿ ನಡೆದ ಹಣಕಾಸಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಮಿತಿ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ, ಎಂ.ಆರ್.ಭೇರಿ, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ, ಕೂಲಿಕಾರ್ಮಿಕರ ಸಂಘಟನೆ ರಾಜ್ಯಾಧ್ಯಕ್ಷ ಯಲ್ಲಪ್ಪ ಆಲ್ದರ್ತಿ, ಅರ್ಜುನ್ ಕೊಪ್ಪರ, ಶಾಂತಕುಮಾರ್ ಹೊನ್ನಟಗಿ, ಹನುಮಂತ ಸಮುದ್ರ, ದುರ್ಗಪ್ಪ ಸಮುದ್ರ, ಕಾಶಿನಾಥ್ ಕೋರಿ, ಪರಶುರಾಮ್ ಜೋಳದಡಗಿ, ಕರಿಯಪ್ಪ ಮಸರಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net