ನಾಗರಿಕ ಪ್ರದೇಶ ಹಸ್ತಾತರಕ್ಕೆ ಕ್ರಮವಾಗಲಿ

Screenshot_2024-07-24-21-00-13-74.jpg
Published on

ಬೆಳಗಾವಿ: ದಂಡುಮಂಡಳಿ ವ್ಯಾಪ್ತಿಯ ಎಲ್ಲ ನಾಗರಿಕ ಪ್ರದೇಶವನ್ನು ರಕ್ಷಣಾ ಸಚಿವಾಲಯದ ನಿರ್ದೇಶನದಡಿ ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ತಯಾರಿಸುವ ಬಗ್ಗೆ ದಂಡು ಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ನವದೆಹಲಿಯಲ್ಲಿ ಬುಧವಾರ ಮನವಿ ಸಲ್ಲಿಸಿದರು.

ಬೆಳಗಾವಿ ದಂಡುಮಂಡಳಿ ವ್ಯಾಪ್ತಿಯ ನೋಟಿಫೈಡ್ ಸಿವಿಲ್ ಏರಿಯಾ ಮಾತ್ರ ಅಧಿಕಾರಿಗಳು ಗುರುತಿಸಿ ಉಳಿದ ಸಿವಿಲ್ ಏರಿಯಾಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಕರಡು ಪ್ರಸ್ತಾವನೆಯಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ಕೇವಲ ಬಜಾರ್ ಏರಿಯಾ ಮಾತ್ರ ಪರಿಗಣಿಸಿ ಬಂಗಲೋ ಏರಿಯಾ ಮಾಡಿರಲಿಲ್ಲ. ಈ ಕುರಿತು ಜು.6ರಂದು ಜರುಗಿದ ದಂಡುಮಂಡಳಿ ಸಭೆಯಲ್ಲಿ ಖುದ್ದಾಗಿ ಹಾಜರಿದ್ದು ಗಮನಕ್ಕೆ ತಂದರೂ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿಲ್ಲ. ಅಲ್ಲದೆ ಸಾರ್ವಜನಿಕ ವಲಯದಲ್ಲಿ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಸಂಸದರು ತಿಳಿಸಿದರು. ರಕ್ಷಣಾ ಸಚಿವಾಲಯದ ಆದೇಶದಂತೆ ಬೆಳಗಾವಿ ದಂಡುಮಂಡಳಿ ವ್ಯಾಪ್ತಿಯ ಎಲ್ಲ ಸಿವಿಲ್ ಏರಿಯಾಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ಕ್ರಮಕ್ಕೆ ವಿನಂತಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಕ್ರಮಕ್ಕಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net