ತೇಜೋವಧೆ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

The members of the taluk unit of the association in Ankola submitted a request to Shirastedar Girisha Jambalikara on Thursday, demanding legal action against those who are agitating against the Government Employees Association.
Published on

ಅಂಕೋಲಾ: ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ, ತಾಲೂಕು ಘಟಗಳ ವಿರುದ್ಧ ಆಧಾರ ರಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಂಕೋಲಾ ಘಟಕದ ಸದಸ್ಯರು ಶಿರಸ್ತೇದಾರ್ ಗಿರೀಶ ಜಾಂಬಳಿಕರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ನೌಕರರ ಹಿತಕಾಯುತ್ತಿದ್ದಾರೆ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.

ಹೀಗಿರುವಾಗ ಸಂಘದ ವಿರುದ್ಧ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಲೂಕು ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ಎನ್. ನಾಯಕ, ಕಾರ್ಯದರ್ಶಿ ಗಣಪತಿ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಜಗದೀಶ ಜಿ. ನಾಯಕ ಹೊಸ್ಕೇರಿ, ಖಜಾಂಚಿ ಗಿರೀಶ ನಾಯಕ, ಉಪಾಧ್ಯಕ್ಷ ಪ್ರಮೋದ ದೊಡ್ಮನೆ, ಕೃಷ್ಣಮೂರ್ತಿ ಮೇಗಲಮನೆ ಪದಾಧಿಕಾರಿಗಳಾದ ರಫೀಕ ಶೇಖ್, ರವಿ ಕೋಟೆಬಾವಿ, ರವಿ ನಾಯಕ, ಮೇಲಾಯುದ ನಾಯರ್, ತುಕರಾಮ ಬಂಟ, ಅನುಪಮಾ ನಾಯ್ಕ, ಗೀತಾ ನಾಯ್ಕ, ನಾಗಭೂಷಣ ನಾಯಕ, ವಿದ್ಯಾಧರ ಗಾಂವಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net