ಮಾಹಿತಿ ಸೋರಿಕೆಯಾದರೆ ಕ್ರಮ

23HUKKERI1A.jpg
Published on

ಹುಕ್ಕೇರಿ: ತಾಲೂಕಿಗೆ ವರ್ಗವಾಗಿ ಬಂದ ಕೆಲ ಅಕಾರಿಗಳು ಜನಪ್ರತಿನಿಗಳು ಅಲ್ಲದವರನ್ನು ಭೇಟಿಯಾಗಿ ತಾಲೂಕಾಡಳಿತದ ಮಾಹಿತಿ ನೀಡುತ್ತಿರುವುದು ಕೇಳಿ ಬರುತ್ತಿದೆ. ಇನ್ನು ಮುಂದೆ ಇಂತಹ ಘಟನೆ ಕಂಡು ಬಂದರೆ  ಸಹಿಸುವುದಿಲ್ಲ ಎಂದು ಶಾಸಕ ನಿಖಿಲ ಕತ್ತಿ ಅಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಮತ ಗೆದ್ದು ಅಕಾರ ಹಿಡಿದ ನನ್ನನ್ನು ಕಡೆಗಣಿಸಿ ಇತರರಿಗೆ ಅಕಾರಿಗಳು ಮಾಹಿತಿ ನೀಡುತ್ತಿರುವುದು ಸರಿಯಲ್ಲ. ಕ್ಷೇತ್ರದ ಪ್ರತಿನಿಯಾಗಿ ಯಾವುದೇ ಕಾಮಗಾರಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವ ಹಕ್ಕು ನನಗಿದೆ. ಇತರರು ಹೇಳಿದ ಮಾತ್ರಕ್ಕೆ ಅಕಾರಿಗಳು ಯಾವುದೇ ಕೆಲಸ ಮಾಡಲು ಮುಂದಾದರೆ ಅವರ ವಿರುದ್ಧ  ಕ್ರಮ ಕೈಗೊಂಡು ಇಲ್ಲಿಂದ ಎತ್ತಂಗಡಿ ಮಾಡುವವರೆಗೆ ನಾನು ವಿರಮಿಸುವುದಿಲ್ಲ ಎಂದರು.

ತಾಲೂಕಾಡಳಿತದಿಂದ ಮಾರ್ಚ್ ಅಂತ್ಯದೊಳಗಾಗಿ ಮುಗಿಯಬೇಕಾಗಿದ್ದ ಜಲಜೀವನ್ ಮಿಷನ್ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿಯದ್ದಕ್ಕೆ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 116 ಕಾಮಗಾರಿಗಳಲ್ಲಿ ಇನ್ನೂ ಆರು ಬಾಕಿಯಿವೆ. ಬಹಳಷ್ಟು ಕಾಮಗಾರಿಗಳಲ್ಲಿ ಸಮರ್ಪಕ ಕಾರ್ಯನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬೆಳೆ ಹಾನಿ ಸಮೀಕ್ಷೆ, ಶುದ್ಧ ಕುಡಿಯುವ ನೀರಿನ ಸರಬರಾಜು, ಅನಿಯಮಿತ ವಿದ್ಯುತ್ ಕಡಿತ, ವಸತಿ ಯೋಜನೆ ಅನುಷ್ಠಾನ ಸೇರಿ ವಿವಿಧ ಇಲಾಖೆಗಳ ಪ್ರಗತಿ ತಿಳಿದುಕೊಂಡು ಅಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗವಿಕಲ ಪ್ರತಿನಿಗಳಿಗೆ ನೇಮಕ ಆದೇಶ ಪತ್ರ ವಿತರಿಸಿದರು. ತಹಸೀಲ್ದಾರ್ ಮಂಜುಳಾ ನಾಯಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ, ತಾಪಂ ಇಒ ಪ್ರವೀಣ ಕಟ್ಟಿ,ಅಕಾರಿಗಳಾದ ಮಹಾಂತೇಶ ಬಸಾಪೂರ, ಎಸ್.ಎಂ.ಆವಜಿ, ರಾಜಶೇಖರ ಪಾಟೀಲ, ಸಂಗಮೇಶ ಪಟ್ಟಣಶೆಟ್ಟಿ, ಮಹಾಂತೇಶ ಸಜ್ಜನ, ಪ್ರಸನ್ನ ಬೆಲ್ಲದ,
ಡಾ.ಉದಯ ಕುಡಚಿ, ಡಾ.ರಮೇಶ ಕದಂ ಇತರರಿದ್ದರು.

ಹುಕ್ಕೇರಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ನಿಖಿಲ ಕತ್ತಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ತಹಸೀಲ್ದಾರ್‌ಮಂಜುಳಾ ನಾಯಕ, ತಾಪಂ ಇಒ ಪ್ರವೀಣ ಕಟ್ಟಿ  ಇದ್ದರು.
ಹುಕ್ಕೇರಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ನಿಖಿಲ ಕತ್ತಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ತಹಸೀಲ್ದಾರ್‌ಮಂಜುಳಾ ನಾಯಕ, ತಾಪಂ ಇಒ ಪ್ರವೀಣ ಕಟ್ಟಿ  ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net