

ಕೆರೂರ: ಗುಣಮಟ್ಟದ ಕಾಮಗಾರಿ ನಿರ್ಮಿಸಿ, ಕಳಪೆ ಕಂಡುಬಂದರೆ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಅನಿವಾರ್ಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಸಮೀಪದ ಮಮಟಗೇರಿ ಹಾಗೂ ಕಲ್ಲಾಪುರ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ 8 ಲಕ್ಷ ರೂ. ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 15 ಲಕ್ಷ ರೂಗಳಲ್ಲಿ ಕೈಗೊಂಡ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮದ ಬಡ ಮಕ್ಕಳ ಪೌಷ್ಟಿಕ ಆಹಾರ, ಆರೋಗ್ಯ ವೃದ್ಧಿ, ಭವಿಷ್ಯದ ಶೈಕ್ಷಣಿಕ ಬುನಾದಿಗೆ ಅಂಗನವಾಡಿ ಕಲಿಕೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಡೊಳ್ಳಿನ, ಉಪಾಧ್ಯಕ್ಷೆ ಶಕುಂತಲಾ, ಸಿಡಿಪಿಒ ಎಸ್.ಬಿ. ನಂದೆಪ್ಪನವರ, ಮಾಜಿ ಗ್ರಾಪಂ ಸದಸ್ಯ ರಾಮಣ್ಣ ಡೊಳ್ಳಿನ, ಬಸಮ್ಮ ಹೊಸಮನಿ, ಪ್ರಕಾಶ ಬಿಲ್ಲಾರ, ಪುಂಡಲೀಕ ಘಟ್ನೂರ, ದ್ಯಾಮಣ್ಣ ವಡವಟ್ಟಿ, ಯಲ್ಲಪ್ಪ ಘಟ್ನೂರ, ಮಹಾಂತೇಶ ಹುಲ್ಲಿಕೇರಿ, ಸದಾನಂದ ಹುಡೇದಮನಿ, ಮುತ್ತಪ್ಪ ಆನೆಗುದ್ದಿ, ಯಲ್ಲವ್ವ ಕರಡಿಗುಡ್ಡ, ಪುಂಡಲೀಕ ಕರಡಿಗುಡ್ಡ, ಹಣಮಂತ ಹುರಳಿ, ಶ್ರೀಕಾಂತ ಗೌಡರ, ಬೀರಪ್ಪ ಪೆಂಟಿ, ಹಣಮಂತ ನರಗುಂದ, ಮಹಾದೇವಪ್ಪ ಎತ್ತಿನಮನಿ ಇತರರಿದ್ದರು.