ಸಾಲ ವಸೂಲಾತಿಗೆ ಕಿರುಕುಳ ನೀಡಿದರೆ ಕ್ರಮ

ಸಿಂಧನೂರಿನ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಖಾಸಗಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿದರು. ವಿವಿಧ ಮೈಕ್ರೋ ಫೈನಾನ್ಸ್‌ಗಳ ಅಧಿಕಾರಿಗಳು ಇದ್ದರು.
ಸಿಂಧನೂರಿನ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಖಾಸಗಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿದರು. ವಿವಿಧ ಮೈಕ್ರೋ ಫೈನಾನ್ಸ್‌ಗಳ ಅಧಿಕಾರಿಗಳು ಇದ್ದರು.
Published on

ಸಿಂಧನೂರು: ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುವ ಫೈನಾನ್ಸ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಖಾಸಗಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮೈಕ್ರೋ ಫೈನಾನ್ಸ್‌ಗಳ ಬಗ್ಗೆ ಸಾರ್ವಜನಿಕರಿಂದ ತಹಸಿಲ್ ಕಚೇರಿ ಹಾಗೂ ಶಾಸಕರಿಗೆ ದೂರು ಬಂದಿವೆ. ಈ ಹಿನ್ನೆಲೆ ಹಾಗೂ ಸರ್ಕಾರದ ನಿರ್ದೇಶನದಂತೆ ಸಭೆ ಕರೆಯಲಾಗಿದೆ. ಯಾವುದೇ ಫೈನಾನ್ಸ್‌ಗಳು ಆರ್‌ಬಿಐ ಮಾರ್ಗದರ್ಶನ ಆಧರಿಸಿ, ಸರ್ಕಾರದ ನಿಯಮಗಳ ಅನ್ವಯ ಸಾಲ ಮರುಪಾವತಿಗೆ ಮುಂದಾಗಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿ ಬಲವಂತ, ಸಾರ್ವಜನಿಕವಾಗಿ ಅವಮಾನಿಸಿ, ಕಚೇರಿ ಅವಧಿ ಹೊರತುಪಡಿಸಿ ಮನಸೋಇಚ್ಛೆಯಿಂದ ಸಾಲ ವಸೂಲಿ ಮಾಡುವುದು ಕಾನೂನುಬಾಹಿರ. ಗ್ರಾಹಕರಿಗೆ ಸಾಲ ಮರುಪಾವತಿಸಲು ಮಾನವೀಯತೆ ದೃಷ್ಟಿಯಿಂದ ಕಾಲಾವಕಾಶ ನೀಡಬೇಕು. ಒಂದು ವೇಳೆ ದೌರ್ಜನ್ಯದಿಂದ ವಸೂಲಾತಿ ಮಾಡಿದರೆ, ಎಫ್‌ಐಆರ್ ದಾಖಲಿಸಲಾಗುತ್ತದೆ. ಅಂಥ ಮೈಕ್ರೋ ಫೈನಾನ್ಸ್‌ಗಳನ್ನು ರದ್ದುಪಡಿಸಲು ಆರ್‌ಬಿಐ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು.

ಕೊಟ್ಟ ಸಾಲ ಕೇಳಲು ಬೆಳಗ್ಗೆ ಅಥವಾ ರಾತ್ರಿ ವೇಳೆ ಗ್ರಾಹಕರ ಮನೆಮುಂದೆ ಗಂಟೆಗಟ್ಟಲೇ ಕುಳಿತು ಕಿರುಕುಳ ನೀಡುವುದು, ಜನರ ಮುಂದೆ ಅವಮಾನಿಸುವುದು ನಡೆಯುತ್ತಿದೆ ಎಂದು ಕೆಲವರು ದೂರು ನೀಡಿದ್ದಾರೆ. ಯಾವುದೋ ಕಾರಣದಿಂದ ಸಾಲ ಮರುಪಾವತಿಯಲ್ಲಿ ವಿಳಂಬವಾಗಿರಬಹುದು ಹಾಗಾಗಿ ಕಾನೂನಾತ್ಮಕವಾಗಿ ಅವರಿಂದ ವಸೂಲಿ ಮಾಡಬೇಕು. ಬೀದಿ ಬದಿ ವ್ಯಾಪಾರಸ್ಥರು ತೆರವು ಕಾರ್ಯಾಚರಣೆಯಿಂದ ಹಲವು ದಿನಗಳಿಂದ ಸಮಸ್ಯೆಯಲ್ಲಿದ್ದು, ಅವರಿಗೆ ಕಾಲಾವಕಾಶ ನೀಡಬೇಕು. ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ತಹಸೀಲ್ದಾರ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net