ಕ್ರಮಕ್ಕೆ ಮುಂದಾಗದ ರಾಜ್ಯ ಸರ್ಕಾರ

august 23 kottur 01
ಕೊಟ್ಟೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಧರ್ಮಸ್ಥಳ ಉಳಿವಿಗಾಗಿ ಧರ್ಯಯುದ್ಧ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ತಾಲೂಕು ಅಧ್ಯಕ್ಷ ಅಂಗಡಿ ಪಂಪಾಪತಿ, ಪಪಂ ಉಪಾಧ್ಯಕ್ಷ ಸಿದ್ದಯ್ಯ ಮುಂತಾದವರಿದ್ದರು.
Published on

ಕೊಟ್ಟೂರು: ಧರ್ಮಸ್ಥಳ ಉಳಿವಿಗಾಗಿ ಹೋರಾಟ ನಡೆದಿದ್ದು, ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರನ್ನು ತನಿಖೆಗೆ ಒಳಪಡಿಸಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ರೆಡ್ಡಿ ಆಗ್ರಹಿಸಿದರು.

ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಧರ್ಮಸ್ಥಳ ಉಳಿವಿಗಾಗಿ ಧರ್ಯಯುದ್ಧ ಪ್ರತಿಭಟನೆಯಲ್ಲಿ ಶನಿವಾರ ಮಾತನಾಡಿದರು. ಸೌಜನ್ಯಗೆ ನ್ಯಾಯ ಸಿಗಬೇಕೆಂಬುದು ನಮ್ಮ ಪಕ್ಷದ ಧ್ಯೇಯವಾಗಿದೆ. ಆದರೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ತಾಲೂಕು ಅಧ್ಯಕ್ಷ ಅಂಗಡಿ ಪಂಪಾಪತಿ ಮಾತನಾಡಿ, ನಿಜಾಮ ಆಡಳಿತವಿದ್ದಾಗ ಹಿಂದುಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಮಾದರಿಯಲ್ಲಿ ಪ್ರಸ್ತುತ ಸರ್ಕಾರ ಮಾಡುತ್ತಿದೆ. ಯಾರೋ ಹೇಳಿದರೆಂದು ಸರ್ಕಾರ ಧರ್ಮಸ್ಥಳದಲ್ಲಿ ಜೆಸಿಬಿಯಿಂದ ಅಗೆಯುತ್ತಿರುವಂತೆ, ಬೇರೆವರು ಹೇಳಿದರೆ ಮಸೀದಿ, ಚರ್ಚಗಳನ್ನು ಅಗೆಯುತ್ತರಾ ಎಂದು ಪ್ರಶ್ನಿಸಿದರು.

ಮಂಡಲ ಬಿಜೆಪಿ ಅಧ್ಯಕ್ಷ ಪ್ರಕಾಶ ಬೆನ್ನಕಲ್ಲು, ಪಪಂ ಸದಸ್ಯ ಬೋರವೆಲ್ ತಿಪ್ಪೇಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಹರಾಳು ಗುರುಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಗೊರ್ಲಹಳ್ಳಿ ಉಮೇಶ, ಗ್ರಾಪಂ ಮಾಜಿ ಅಧ್ಯಕ್ಷ ಜುಂಜಿ ಸಿದ್ದಲಿಂಗಪ್ಪ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ದೇವರಮನಿ ಉಮಾದೇವಿ, ಪಪಂ ಉಪಾಧ್ಯಕ್ಷ ಸಿದ್ದಯ್ಯ, ಪ್ರಮುಖರಾದ ವೀರೇಶ ಗೌಡ್, ವಿಕ್ರಂ, ಮರಬದ ಕೊಟ್ರೇಶ, ಚಿರಬಿ ಪ್ರಕಾಶ, ಶಿವಪ್ರಕಾಶ, ಜಂಬೂರಿ ಚಂದ್ರು, ಅಭಿಷೇಕ, ಜಗದೀಶ, ಬಸವರಾಜ್. ವಿಶ್ವನಾಥ್, ಬಿ.ಆರ್. ಕುಮಾರ್,ಶ್ರೀಧರ, ಮಂಜುನಾಥ ಭಜಂತ್ರಿ, ಉಜ್ಜಿನಿ ಚನ್ನವೀರ ಸ್ವಾಮಿ, ಎಂ.ಮಲ್ಲಿಕಾರ್ಜನ, ಮಂಜುನಾಥ್ ಹೀರೆಮಠ, ಕೋಗಳಿ ಹನುಮಂತಪ್ಪ, ಸವಿತಾ ಕೋನಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net