ರಸ್ತೆ, ಒಳಚರಂಡಿ ಸುಧಾರಣೆಗೆ ಕ್ರಮ

Published on

ಲಕ್ಷೆ್ಮೕಶ್ವರ: ಪಟ್ಟಣದ ಧಾರ್ವಿುಕ ಕ್ಷೇತ್ರ ದೂದಪೀರಾಂ ದರ್ಗಾ ಮತ್ತು ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಸ್ಪೀಕರ್ ಯು.ಟಿ. ಖಾದರ್ ಮತ್ತು ಪೌರಾಡಳಿತ ಸಚಿವ ರಹೀಂಖಾನ್ ಶುಕ್ರವಾರ ಭೇಟಿ ನೀಡಿದರು.

ಯು.ಟಿ. ಖಾದರ್ ಮಾತನಾಡಿ, ಎಲ್ಲ ಧರ್ಮಗಳ ಧಾರ್ವಿುಕ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು. ತಾಲೂಕಿನ ರಸ್ತೆಗಳು ಹದಗೆಟ್ಟಿರುವ ರಸ್ತೆಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೌರಾಡಳಿತ ಸಚಿವ ರಹೀಂಖಾನ್, ನಾನು ಬಹುತೇಕ ಕ್ಷೇತ್ರಗಳಿಗೆ ಹೋಗಿದ್ದೇನೆ. ಇಷ್ಟೊಂದು ಹದಗೆಟ್ಟ ರಸ್ತೆ ನೋಡಿರಲಿಲ್ಲ. ಈ ಮೊದಲು ಇಲ್ಲಿ ಎಂಎಲ್​ಎ ಯಾರಿದ್ದರು?. ಎಂದು ಕೇಳಿದರು. ಪಟ್ಟಣದಲ್ಲಿನ ಹದಗೆಟ್ಟ ರಸ್ತೆಯ ಅಭಿವೃದ್ಧಿ, ಅರ್ಧಕ್ಕೆ ನಿಂತಿರುವ ಒಳಚರಂಡಿ ಯೋಜನೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಬೇರೆ ತಾಲೂಕಿಗೆ ಹೋಲಿಸಿದರೆ ಕ್ಷೇತ್ರ ಇಷ್ಟೊಂದು ಹಿಂದುಳಿದಿರುವುದು ಏಕೆ ಎಂಬುದು ಬೇರೆ ವಿಷಯ. ಈಗ ಬಗ್ಗೆ ಉಸ್ತುವಾರಿ ಮತ್ತು ಕ್ಷೇತ್ರದ ಶಾಸಕರೊಂದಿಗೆ ರ್ಚಚಿಸಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು. ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ್​ಸಾಬ್ ಕಣಕೆ, ದಾದಾಪೀರ ಮುಚ್ಛಾಲೆ, ಚನ್ನಪ್ಪ ಜಗಲಿ, ಎಂ.ಎಂ. ಗದಗ, ಪುರಸಭೆ ಸದಸ್ಯರಾದ ಫಿರ್ದೂಸ್ ಆಡೂರ, ರಾಮು ಗಡದವರ, ಎಸ್.ಕೆ. ಹವಾಲ್ದಾರ, ಮುಸ್ತಾಕಮ್ಮದ್ ಶಿರಹಟ್ಟಿ, ವಿ.ಜಿ. ಪಡಗೇರಿ, ಶಫಿ ಸಿದ್ದಾಪುರ, ಸುರೇಶ ರಾಚನಾಯ್ಕರ, ಸಿದ್ದನಗೌಡ ಬಳ್ಳೊಳ್ಳಿ, ಗಂಗಾಧರ ಮೆಣಸಿನಕಾಯಿ, ಬಿ.ಎಸ್. ಬಾಳೇಶ್ವರಮಠ, ವಿರೂಪಾಕ್ಷಪ್ಪ ಆದಿ, ಡಿ.ಬಿ. ಬಳಿಗಾರ ಬಸವರಾಜ ಬೆಂಡಿಗೇರಿ, ಶೇಖಣ್ಣ ಹುರಕಡ್ಲಿ. ಬಸಣ್ಣ ಪುಠಾಣಿ, ಪ್ರಕಾಶ ಕೊಂಚಿಗೇರಿಮಠ, ಮಾಲಾದೇವಿ ದಂಧರಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net