ವಿದ್ಯಾದೇಗುಲ ಕೊಠಡಿಗಳ ದುರಸ್ತಿಗೆ ಕ್ರಮ

MLA
Published on

ಲಕ್ಷ್ಮೇಶ್ವರ: ಕ್ಷೇತ್ರದಲ್ಲಿ ಶತಮಾನ, ಶತಮಾನೋತ್ತರ, ಶತಮಾನ ದಂಚಿನಲ್ಲಿರುವ ನೂರಾರು ಶಾಲೆಗಳ ಅಭಿವೃದ್ಧಿಯಾಗಬೇಕಿದ್ದು, ಇಂತಹ ಶಾಲೆಗಳ ಅಭಿವೃದ್ಧಿ ಮಾಡುವುದಷ್ಟೇ ಅಲ್ಲದೆ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಮೊದಲ ಪ್ರಾಶಸ್ತ್ಯ ನೀಡುತ್ತೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಸಂಪೂರ್ಣ ಸೋರುತ್ತಿರುವ ಕುರಿತು ಮಾಹಿತಿ ತಿಳಿದು ಶುಕ್ರವಾರ ಶಾಲೆಗೆ ಭೇಟಿ ನೀಡಿ ಎಲ್ಲ ಕೊಠಡಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಸೋರುತ್ತಿರುವ ಮತ್ತು ಶಿಥಿಲಗೊಂಡಿರುವ ಶಾಲೆಗಳ ಮಾಹಿತಿ ಪಡೆದು ಜಿಲ್ಲಾಕಾರಿಯನ್ನು ಭೇಟಿಯಾಗಿ ಇರುವ ಸಮಸ್ಯೆ ವಿವರಿಸಿ ಸಾಧ್ಯವಾದಷ್ಟು ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಲಾಗುವುದು. ಹಳೆಯ ಕಟ್ಟಡಗಳು ಸೋರುತ್ತಿರುವ ಕಡೆ ಅವುಗಳ ದುರಸ್ತಿಗೆ ಕ್ರಮ ಅಥವಾ ಬೀಳುವ ಹಂತದಲ್ಲಿದ್ದರೆ ಹೊಸ ಕಟ್ಟಡಕ್ಕೆ ಅನುದಾನ ಸೇರಿದಂತೆ ಕ್ಷೇತ್ರದಲ್ಲಿನ ಎಲ್ಲ ಶಾಲೆಗಳನ್ನು ಸುಧಾರಿಸಲು ಆದ್ಯತೆ ನೀಡುತ್ತೇನೆ ಎಂದರು.

ನಂತರ ಬಿಸಿಯೂಟ, ಶಿಕ್ಷಕರ ಸಮಸ್ಯೆ, ಆಟ-ಪಾಠ ಕುರಿತು ಶಾಲೆಯ ಮಕ್ಕಳ ಜತೆಗೆ ಚರ್ಚಿಸಿದರು. ಬಿಇಒ ಜಿ.ಎಂ. ಮುಂದಿನಮನಿ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಬಸಾಪೂರ, ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ, ಬಿಆರ್‌ಪಿ ಈಶ್ವರ ಮೇಡ್ಲೆರಿ, ಸತೀಶ ಬೋಮಲೆ, ಶಕ್ತಿ ಕತ್ತಿ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net