

ಚಿಕ್ಕಬಳ್ಳಾಪುರ : ರಾಜ್ಯ ಕಷಿ ಇಲಾಖೆಯಲ್ಲಿ ಶೇ.57ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿದ್ದು ಇದನ್ನು ನೀಗಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ 950 ವಿವಿಧ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಬ್ಬಂದಿ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಆಯ್ಕೆ ಪ್ರಕ್ರಿಯೆ ನಿರ್ವಹಣೆಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಗೆ ದೊಡ್ಡ ಅಣೆಕಟ್ಟುಗಳು ಭರ್ತಿಯಾಗಿದ್ದು, ಬಿತ್ತನೆಯಲ್ಲಿ ಶೇ.84ರಷ್ಟು ಸಾಧನೆಯಾಗಿದೆ. ಹಸಿರೆಲೆ ಗೊಬ್ಬರಕ್ಕಾಗಿ ಇತ್ತೀಚೆಗೆ 15 ಕೋಟಿ ರೂ. ಬಿಡುಗಡೆಗೊಳಿಸಿದ್ದು ರಾಜ್ಯದ ಎಲ್ಲ ತಾಲೂಕುಗಳಿಗೆ ಕಷಿ ಭಾಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು.
ರಾಜ್ಯದ 17 ಲಕ್ಷ ರೈತರಿಗೆ 1,911 ಕೋಟಿ ಬೆಳೆ ವಿಮೆ ಪರಿಹಾರ ಸಿಕ್ಕಿದೆ. ಈ ಬಾರಿ ಬೆಳೆ ವಿಮೆ ಪ್ರಕ್ರಿಯೆಯಲ್ಲಿ ಹಲವು ಪರಿಷ್ಕರಣೆ ಕೈಗೊಂಡಿದ್ದು ವಿಮೆ ಕಂಪನಿಗಳು ನೋಂದಣಿಯಾದ ಬೆಳೆ ವಿಮೆ ಹಣದ ಶೇ.20ಕ್ಕಿಂತ ಹೆಚ್ಚಿನ ಲಾಭಾಂಶವನ್ನು ಇಟ್ಟುಕೊಳ್ಳದಂತೆ ನಿಯಮ ರೂಪಿಸಲಾಗಿದೆ. ಅಧಿಕ ಲಾಭಾಂಶ ಉಳಿಕೆಯಾದಲ್ಲಿ ಸರ್ಕಾರದ ಖಾತೆಗೆ ಜಮಾ ಮಾಡಲು, ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಪಾವತಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ಕಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್, ಜಲಾನಯನ ಇಲಾಖೆ ಆಯುಕ್ತ ಮಹೇಶ್ ಶಿರೂರು, ನಿರ್ದೇಶಕ ಪದ್ಮಯ್ಯ ನಾಯಕ್, ಕಷಿ ನಿರ್ದೇಶಕ ಜಿ.ಟಿ.ಪುತ್ರ, ಸಾವಯವ ಕಷಿ ಅಪರ ಕಷಿ ನಿರ್ದೇಶಕ ವೆಂಕಟರೆಡ್ಡಿ ಜೆ.ಪಾಟೀಲ್, ಉಪ ಕಾರ್ಯದರ್ಶಿ ಆರ್.ಮಹೇಶ್, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್ ಮತ್ತಿತರರು ಇದ್ದರು.
ರಾಷ್ಟ್ರೀಯ ಸರಾಸರಿಗಿಂತ 4 ಪಟ್ಟು ಹೆಚ್ಚು ಗೊಬ್ಬರ ಬಳಕೆ
ರಾಜ್ಯದ ಕರಾವಳಿ ಭಾಗದಲ್ಲಿ ರೈತರು ಕಷಿಯಲ್ಲಿ ಅತಿ ಕಡಿಮೆ ರಸಗೊಬ್ಬರ ಬಳಸುತ್ತಿದ್ದಾರೆ. ಉಳಿದಂತೆ ಬಹುತೇಕ ಕಡೆ ಅಧಿಕವಾಗಿದೆ. ಅದರಲ್ಲೂ ಬಯಲುಸೀಮೆ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ 4 ಪಟ್ಟು ಅಧಿಕವಾಗಿರುವುದು ಗಮನಕ್ಕೆ ಬಂದಿದೆ. ಈ ಭಾಗದಲ್ಲಿ ಅರಿವು ಕಾರ್ಯಕ್ರಮಗಳನ್ನು ಕೈಗೊಂಡು ರಸಗೊಬ್ಬರ ಬಳಕೆಯನ್ನು ಹಂತ ಹಂತವಾಗಿ ಇಳಿಸಲು ಆದ್ಯತೆ ನೀಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ವಾತನಾಡಿ, ಸಮಗ್ರ ಸಾವಯವ ಕಷಿಯಲ್ಲಿ ಪ್ರಗತಿ ಸಾಧಿಸುತ್ತಿರುವ ರೈತರನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ಸನ್ಮಾನಿಸಬೇಕು ಎಂದು ಕಷಿ ಸಚಿವರಲ್ಲಿ ಮನವಿ ವಾಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ, ಕಷಿ ಇಲಾಖೆ ಜಂಟಿ ಕಷಿ ನಿರ್ದೇಶಕಿ ಜಾವೀದಾ ನಾಸೀವಾ ಖಾನಂ, ಕಷಿ ಉಪ ನಿರ್ದೇಶಕ ಚಂದ್ರಕುವಾರ್, ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ವಾಜಿ ಶಾಸಕ ಕೆ.ಪಿ.ಬಚ್ಚೆಗೌಡ, ಜಿ.ಪಂ.ವಾಜಿ ಸದಸ್ಯ ಕೆ.ಎಂ.ಮುನೇಗೌಡ ಮತ್ತಿತರರು ಇದ್ದರು.
ರೈತ ತೋಟಗಳಿಗೆ ಸಚಿವರ ಭೇಟಿ
ಜಿಲ್ಲೆಯ ವಿವಿಧೆಡೆ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ, ರೈತರದೊಂದಿಗೆ ಸಂವಾದ ನಡೆಸಿದರು. ಪ್ರಗತಿದಾಯಕ ಕೃಷಿ, ಸಾವಯವ ಪದ್ಧತಿ, ಇಳುವರಿ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು. ಚಿಕ್ಕಬಳ್ಳಾಪುರ ತಾಲೂಕಿನ ಕೊತ್ತನೂರಿನ ಸಮಗ್ರ ಕಷಿ ಪದ್ಧತಿ ಅನುಸರಿಸುತ್ತಿರುವ ಗೌರಮ್ಮ ನಂಜುಂಡಯ್ಯ ಅವರ ಜಮೀನು, ಬನ್ನಿಕುಪ್ಪೆಯ ನರಸಮ್ಮ, ಯಲುವಹಳ್ಳಿಯ ಮುನಿಶಾಮಪ್ಪ ಜಮೀನುಗಳಲ್ಲಿ ಕೃಷಿ ಚಟುವಟಿಕೆಯನ್ನು ವೀಕ್ಷಿಸಿದರು. ಸಾವಯವ ಸಮಗ್ರ ಕಷಿಯ ಸವಾಲು, ಅನುಕೂಲಗಳು ಮತ್ತು ಸಾಧನೆಗೆ ಪ್ರೇರಣೆಗಳ ಅನುಭವ ಕುರಿತು ಚಲುವರಾಯಸ್ವಾಮಿ ಸಂವಾದ ನಡೆಸಿದರು. ಮಣ್ಣಿನ ಆರೋಗ್ಯ ಕಾಪಾಡಲು ರಾಸಾಯನಿಕ ಗೊಬ್ಬರಗಳ ಬಳಕೆ ನಿಲ್ಲಿಸಬೇಕು. ಸಾವಯವ ಕಷಿಗೆ ಒಲವು ತೋರಬೇಕು. ಇದು ಮಣ್ಣಿನ ಗುಣಮಟ್ಟ ಮತ್ತು ಕೃಷಿ ಇಳುವರಿಗೆ ವಾತ್ರವಲ್ಲ, ಮನುಷ್ಯನ ಆರೋಗ್ಯಕ್ಕೂ ಸಹಕಾರಿ. ರಸಗೊಬ್ಬರಗಳಿಂದ ತಾತ್ಕಾಲಿಕವಾಗಿ ಹೆಚ್ಚು ಇಳುವರಿ ಸಿಗಬಹುದು. ಆದರೆ, ಭವಿಷ್ಯದಲ್ಲಿ ದೀರ್ಕಾಲೀನ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಹೇಳಿದರು.
ಸಾವಯವ ಕೃಷಿಯಲ್ಲೂ ಲಾಭವಿದೆ
ಪ್ರಗತಿಪರ ರೈತ ಮಹಿಳೆ ಗೌರಮ್ಮ ವಾತನಾಡಿ, ಅನ್ನ ಕೊಡುವ ಭೂಮಿಗೆ ವಿಷ ಉಣಿಸುತ್ತಿರುವುದು ಒಳ್ಳೆಯದಲ್ಲ. ಭೂತಾಯಿ ಏನಾಗಬೇಕು. ಈ ಹಿಂದೆ ಸ್ಥಳೀಯವಾಗಿ ರೈತರು ಸಾವಯವ ಔಷಧ, ಗೊಬ್ಬರವನ್ನು ತಯಾರಿಸಿಕೊಂಡು ಆರೋಗ್ಯದಾಯಕ ಕೃಷಿ ಮಾಡುತ್ತಿದ್ದರು. ಇದೀಗ ವಿಷವನ್ನಿಕ್ಕಿ ಬೆಳೆ ಬೆಳೆಯಲಾಗುತ್ತಿದೆ. ಇದು ಸರಿಯಲ್ಲ. ಈಗಲಾದರೂ ಬದಲಾಗಬೇಕು. ಸಾವಯವ ಕೃಷಿಯಿಂದಲೂ ಉತ್ತಮ ಆದಾಯ ಗಳಿಸಬಹುದು. ಆದರೆ, ಇದಕ್ಕೆ ತಾಳ್ಮೆ, ಪ್ರಾಮಾಣಿಕ ಪರಿಶ್ರಮ ಅಗತ್ಯ ಎಂದರು.
ಸೆಂಟರ್ ಆ್ ಎಕ್ಸಲೆನ್ಸಿ ಉದ್ಘಾಟನೆ
ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ಕಟ್ಟಡದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸೆಂಟರ್ ಆಫ್ ಎಕ್ಸಲೆನ್ಸಿ ಕಟ್ಟಡವನ್ನು ಕಷಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಿದರು.
ಗೌರಮ್ಮ ಕೃಷಿಗೆ ಸಚಿವರ ಮೆಚ್ಚುಗೆ
ಕೊತ್ತನೂರಿನಲ್ಲಿ 2 ಎಕರೆ ಜಮೀನಿನಲ್ಲಿ ಸಾವಯವ ಕಷಿ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ಪ್ರಗತಿಪರ ರೈತ ಮಹಿಳೆ ಗೌರಮ್ಮ ಪರಿಶ್ರಮಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಹೊಲದಲ್ಲಿ ಬೆಳುಳ್ಳಿ ಬಿತ್ತನೆ ವಾಡಿದರು. ತರಕಾರಿ, ಫಲಪುಷ್ಪ, ಕಷಿ ಮತ್ತು ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಜತೆಗೆ ಹಸು, ಕುರಿ, ಸಾವಯವ ಗೊಬ್ಬರ ತಯಾರಿಕೆ ಮತ್ತು ಬಳಕೆಯ ವ್ಯವಸ್ಥೆಯನ್ನು ವೀಕ್ಷಿಸಿದರು.