ಭೂ ದಾಖಲೆ ಸಂರಕ್ಷಣೆಗೆ ಕ್ರಮ

1
ಕೆಜಿಎಫ್​ ತಾಲೂಕು ಆಡಳಿತ ಸೌಧದಲ್ಲಿ ಭೂಸುರಕ್ಷಾ ಯೋಜನೆಯ ಡಿಜಿಟಲೀಕರಣಕ್ಕೆ ಶಾಸಕಿ ರೂಪಕಲಾ ಚಾಲನೆ ನೀಡಿದರು. ನಾಗವೇಣಿ, ಶಿರಸ್ತೇದಾರ್​ ಮಂಜುನಾಥ್​, ಕಂದಾಯ ನಿರೀಕ್ಷಕ ಚಂದ್ರಮೋಹನ್​, ಸಿಬ್ಬಂದಿ ಕಿರಣ್​, ಸತ್ಯಮೂರ್ತಿ ಮುಖಂಡ ಒಬಿಸಿ ಮುನಿಸ್ವಾಮಿ ಇತರರಿದ್ದರು.
Published on

ಶಾಸಕಿ ರೂಪಕಲಾ ಹೇಳಿಕೆ - ಭೂಸುರಕ್ಷಾ ಯೋಜನೆಗೆ ಚಾಲನೆ

ಕೆಜಿಎಫ್​: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಭೂ&ಸುರಕ್ಷಾ ಯೋಜನೆಯೂ ಒಂದಾಗಿದ್ದು, ಇದರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಹಳೇ ದಾಖಲೆಗಳು ಸಂರಕ್ಷಿಸಲ್ಪಟ್ಟು, ಸುಲಭವಾಗಿ ಸಾರ್ವಜನಿಕರ ಕೈ ತಲುಪಲಿವೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಭೂ&ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕೇಂದ್ರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನೂತನವಾಗಿ ಪ್ರಾರಂಭಿಸಲಾಗಿರುವ ಭೂ&ಸುರಕ್ಷಾ ಯೋಜನೆಯಿಂದ ತಾಲೂಕಿನ ಕ್ಯಾಸಂಬಳ್ಳಿ, ಬೇತಮಂಗಲ, ರಾರ್ಬಟ್​ಸನ್​ಪೇಟೆ ಹೋಬಳಿಗಳ ದಾಖಲೆಗಳನ್ನು ಡಿಜಿಟಲ್​ ಮಾದರಿಯಲ್ಲಿ ಸಂಗ್ರಹಿಸಿ ರಸಲಾಗುತ್ತಿದೆ ಎಂದರು.

ಭೂ&ದಾಖಲೆ ಡಿಜಿಟಲೀಕರಣದಿಂದ ಸ್ವಾತಂತ್ರ$್ಯ ಪೂರ್ವ ಮತ್ತು ನಂತರದ ಭೂ&ದಾಖಲೆ ಕೊಠಡಿಯಲ್ಲಿ ಜನರಿಗೆ ಲಭ್ಯವಾಗಲಿದ್ದು, ಎಂದಿಗೂ ಸಂರಕ್ಷಿಸಲ್ಪಡುವುದರಿಂದ ಅಗತ್ಯವಿದ್ದಾಗ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದರು.

ಭೂ ದಾಖಲೆಗಾಗಿ ಕಚೇರಿಗೆ ಅಲೆಯದೆ ನೇರವಾಗಿ ಜನರಿಗೆ ಸಿಗುತ್ತದೆ. ವಿನಾ@ಕಾರಣ ಕಚೇರಿಗೆ ಅಲೆಸುವುದನ್ನು ಅಧಿಕಾರಿಗಳು, ಸಿಬ್ಬಂದಿ ತಪ್ಪಿಸಿ, ಅಗತ್ಯ ಭೂ ದಾಖಲೆಗಳನ್ನು ಜನರಿಗೆ ವಿತರಣೆ ಮಾಡಬೇಕು ಎಂದರು.

ಶಿರಸ್ತೇದಾರ್​ ಮಂಜುನಾಥ್​, ಕಂದಾಯ ನಿರೀಕ್ಷಕ ಚಂದ್ರಮೋಹನ್​, ಸಿಬ್ಬಂದಿ ಕಿರಣ್​, ಸತ್ಯಮೂರ್ತಿ ಮುಖಂಡ ಒಬಿಸಿ

ಮುನಿಸ್ವಾಮಿ ಇತರರಿದ್ದರು.

ಹುಡುಕಾಟ ಸುಲಭ

ತಹಸೀಲ್ದಾರ್​ ನಾಗವೇಣಿ ಮಾತನಾಡಿ, ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಕಡತ ಮತ್ತು ವಹಿಗಳ ಇಂಡೆಕ್ಸಿಂಗ್​, ಕ್ಯಾಟಲಾಗಿಂಗ್​, ಸ್ಕಾ$ನಿಂಗ್​ ಮತ್ತು ಅಪ್​ಲೋಡ್​ ಮಾಡುವಂತಹ ಚಟುವಟಿಕೆ ಒಳಗೊಂಡಿರುತ್ತದೆ. ಕಚೇರಿ ಟಿಪ್ಪಣಿಗಳು, ಆದೇಶ, ಸುತ್ತೋಲೆ, ನಡಾವಳಿಗಳು ಸೇರಿ ವಿವಿಧ ದಾಖಲೆಗಳನ್ನು ಪ್ರತ್ಯೇಕವಾಗಿ ಸ್ಕಾ$ನ್​ ಮಾಡಿ ಸೂಕ್ತ ಕೀವರ್ಡ್​ಗಳೊಂದಿಗೆ ಟ್ಯಾಗ್​ ಮಾಡಿ ತಂತ್ರಾಂಶದಲ್ಲಿ ಅಪ್​ಲೋಡ್​ ಮಾಡಲಾಗುತ್ತದೆ. ತಂತ್ರಾಂಶದಲ್ಲಿ ಕೀವರ್ಡ್​ ಅಳವಡಿಸುವುದರಿಂದ ಸುಲಭವಾಗಿ ಹುಡುಕಬಹುದು ಎಂದರು.

ತಪ್ಪಲಿದೆ ಅಲೆದಾಟ

ಡಿಜಿಟಲೀಕರಣದಿಂದ ಅಭಿಲೇಖಾಲಯದ ಸಿಬ್ಬಂದಿಯನ್ನು ಸಂಪರ್ಕಿಸಿ ದಾಖಲೆಗಳನ್ನು ಪಡೆಯುವುದು ತಪು$್ಪತ್ತದೆ. ಅಲ್ಲದೇ ದಾಖಲೆಗಳ ವ್ಯತ್ಯಾಸ, ರೆಕಾರ್ಡ್​ ಮಿಸ್ಸಿಂಗ್​, ವಿಳಂಬ ಸೇರಿ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿದ್ದು, ನಾಗರಿಕರು ದಾಖಲೆಗಳಿಗಾಗಿ ಕಚೇರಿಗೆ ಭೇಟಿ ನೀಡುವ ಬದಲು ಸಲಭವಾಗಿ ಆನ್​ಲೈನ್​ ಮೂಲಕ ಡೌನ್​ಲೋಡ್​ ಮಾಡಬಹುದು ಎಂದರು.

ನಕಲಿ ದಾಖಲೆ ಸೃಷ್ಟಿಗೆ ಕಡಿವಾಣ

ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತ ಡಿಜಿಟಲ್​ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಸೃಷ್ಟಿ ತಡೆಗಟ್ಟಲು ಮತ್ತು ಆನ್​ಲೈನ್​ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಭೂ&ಸುರಕ್ಷಾ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಶಾಸಕಿ ರೂಪಕಲಾ ಹೇಳಿದರು. ರಾಜ್ಯದ ಕಂದಾಯ ಇಲಾಖೆ ಕೈಗೊಂಡಿರುವ ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖ, ಹಳೇ ಮತ್ತು ಸ್ವಾತಂತ್ರ$್ಯ ಪೂರ್ವದ ಭೂ ದಾಖಲೆಗಳನ್ನು ಇಂಡೆಕ್ಸಿಂಗ್​, ಕ್ಯಾಟಲಾಗಿಂಗ್​, ಸ್ಕಾ$ನಿಂಗ್​ ಮತ್ತು ಅಪ್​ಲೋಡಿಂಗ್​ ಮಾಡಿ ಗಣಕೀರಣಗೊಳಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net