ಮ್ಯಾನ್‌ಹೋಲ್ ದುರಸ್ತಿಗೆ ಕ್ರಮ

ಫೋಟೋ ಶೀರ್ಷಿಕೆ 27 ಸಿಆರ್_ಪಿ-1ಎ.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ದುರಸ್ತಿಪಡಿಸುತ್ತಿರುವ ಪುರಸಭೆ ಸಿಬ್ಬಂದಿ.
Published on

ಚನ್ನರಾಯಪಟ್ಟಣ: ಒಳಚರಂಡಿ ಮ್ಯಾನ್‌ಹೋಲ್ ಒಡೆದು ಕಲುಷಿತ ನೀರು ತುಂಬಿ ಹರಿಯುತ್ತಿದ್ದನ್ನು ಪುರಸಭೆ ಅಧಿಕಾರಿಗಳು ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ.

ಜನನಿಬಿಡ ಹಾಗೂ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಬಿ.ಎಂ.ರಸ್ತೆಯಲ್ಲಿರುವ ಎಲ್ಲೋ ಮಾರ್ಟ್ ಶಾಪಿಂಗ್‌ಮಾಲ್‌ನ ಮುಂಭಾಗದಲ್ಲಿ ಒಳಚರಂಡಿ ಮ್ಯಾನ್‌ಹೋಲ್ ಒಡೆದು ಕಲುಷಿತ ನೀರು ತುಂಬಿ ಹರಿಯುತ್ತಿತ್ತು. ಪುರಸಭೆ ದುರಸ್ತಿ ಮಾಡದೆ ನಿರ್ಲಕ್ಷಿಸಿರುವ ಬಗ್ಗೆ ವಿಜಯವಾಣಿ ‘ಕಲುಷಿತ ನೀರಿನಿಂದ ಅವ್ಯವಸ್ಥೆ’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು.

ವರದಿಯಾದ 48 ಗಂಟೆಯೊಳಗೆ ಒಳಚರಂಡಿ ಮ್ಯಾನ್‌ಹೋಲ್ ದುರಸ್ತಿಗೆ ಪುರಸಭೆ ಮುಂದಾಗಿದ್ದು, ಸಾರ್ವಜನಿಕರು ವಿಜಯವಾಣಿಗೆ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net