ಶಿಥಿಲಾವಸ್ಥೆಯ ಕಟ್ಟಡಗಳ ತೆರವಿಗೆ ಕ್ರಮ

25 Dwd 4
Published on

ಧಾರವಾಡ: ನಗರದ ಸೂಪರ್ ಮಾರುಕಟ್ಟೆಯಲ್ಲಿರುವ ಶಿಥಿಲಾವಸ್ಥೆಯ ಕಟ್ಟಡವನ್ನು ಮೇಯರ್ ಈರೇಶ ಅಂಚಟಗೇರಿ ಗುರುವಾರ ಪರಿಶೀಲಿಸಿದರು. ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ತಾಂತ್ರಿಕ ಸಮಿತಿಯಿಂದ ಕಟ್ಟಡದ ಭದ್ರತೆಯನ್ನು ಪರಿಶೀಲಿಸಿ ಬಳಸಲು ಸೂಕ್ತ ಎಂಬ ವರದಿ ಪಡೆದು ಸೂಕ್ತ ಕ್ರಮ ಜರುಗಿಸಬೇಕು ಎಂದು ಅಽಕಾರಿಗಳಿಗೆ ಸೂಚಿಸಿದರು.
ವರ್ತಕರ ಕೋರಿಕೆಯ ಮೇರೆಗೆ ಭೇಟಿ ನೀಡಿದ್ದ ಮೇಯರ್, ಪಾಲಿಕೆ ಅಽÃನದ ೫೦ ವರ್ಷಗಳ ಹಳೆಯ ಪಾಲಿಕೆಯ ಕಟ್ಟಡವನ್ನು ವೀಕ್ಷಿಸಿದರು. ಇದೇವೇಳೆ ರಸ್ತೆ ಬದಿ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಿದರು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ತುರ್ತಾಗಿ ದುರಸ್ತಿಗೊಳಿಸಲು ಸೂಚಿಸಿದರು.
ಪಾಲಿಕೆಯ ಸಹಾಯಕ ಆಯುಕ್ತ ಎಂ.ಬಿ. ಸಬರದ, ಅಽಕಾರಿಗಳಾದ ಆನಂದ ಕಲ್ಲೋಳಕರ, ಎಸ್.ಎಸ್. ಬಿರಾದಾರ, ಅಮರನಾಥ ಹಾಗೂ ವರ್ತಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net