

ರಟ್ಟಿಹಳ್ಳಿ: ಭಗವತಿ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತು ಈ ಭಾಗದ ರೈತರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಭಗವತಿ ಕೆರೆ ಮತ್ತು ಮದಗ-ಮಾಸೂರು ಕೆರೆಯನ್ನು ಪ್ರವಾಸದ್ಯೋಮ ಇಲಾಖೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಭಗವತಿ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಹಿಂದೆ ಮಾಜಿ ಸಚಿವ ಬಿ.ಸಿ. ಪಾಟೀಲ ಹಾಗೂ ನಾನು ಕೆರೆಯ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇವೆ. ಶೇ. 70ರಷ್ಟು ಕಾಮಗಾರಿ ಮುಕ್ತಾಯವಾಗಿದ್ದು, ಮುಂದಿನ ದಿನಗಳಲ್ಲಿ ರೈತರೊಂದಿಗೆ ಸಭೆ ಮಾಡಿ ಕೆರೆಯ ಸಂಪೂರ್ಣವಾದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ನೀರು ಖಾಲಿಯಾದ ಬಳಿಕ ಮೊದಲು ಕೆರೆಯ ವಿಸ್ತೀರ್ಣ ನಿಗದಿ ಮಾಡಿ, ಸಂಪೂರ್ಣ ಹೂಳು ತೆಗೆದು ಹೆಚ್ಚಿನ ನೀರು ಸಂಗ್ರಹದ ಕೆಲಸ ಮಾಡಲಾಗುವುದು ಎಂದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ನೈಸರ್ಗಿಕವಾಗಿ ಸೃಷ್ಟಿಯಾಗಿ ವರದಾನವಾಗಿರುವ ಈ ಕೆರೆ ಪರಿಪೂರ್ಣವಾಗಿ ನೀರಾವರಿ ಯೋಜನೆಯಾಗಿ ರೈತರಿಗೆ ತಲುಪುತ್ತಿಲ್ಲ. ತಾಲೂಕಿನಲ್ಲಿ ಮದಗ ಮಾಸೂರು ಕೆರೆ ಮತ್ತು ಜೋಕನಾಳ ಗ್ರಾಮದ ಬಳಿ ಇರುವ ಭಗವತಿ ಕೆರೆಗಳ ಅಭಿವೃದ್ಧಿ ಹಾಗೂ ಪ್ರವಾಸದ್ಯೋಮ ತಾಣವನ್ನಾಗಿ ಮಾಡಲು ಶಾಸಕ ಯು.ಬಿ. ಬಣಕಾರ ಸರ್ಕಾರದ ಗಮನ ಸೆಳೆಯಬೇಕು ಎಂದು ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರು, ಜಿಪಂ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಶಿವರಾಜ ಹರಿಜನ, ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಹರಿಜನ, ವಕೀಲ ಎಂ.ಬಿ. ಜೋಕನಾಳ, ಎಸ್.ಬಿ. ತಿಪ್ಪಣ್ಣನವರ, ಮೆಹಬೂಬ್ ಜೋಕನಾಳ, ಫಕೀರಪ್ಪ ತಮಣ್ಣನವರ, ರಾಮಣ್ಣ ಗೌರಕ್ಕನವರ, ಮಂಜಪ್ಪ ಯತ್ತಿನಹಳ್ಳಿ, ಬೀರಪ್ಪ ಕಚ್ಚರಬಿ, ಬಸಪ್ಪ ತಳವಾರ, ರವೀಂದ್ರ ಮುದಿಯಪ್ಪನವರ, ಪರಮೇಶಣ್ಣ ಕಟ್ಟೇಕಾರ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ತಾಪಂ ಮಾಜಿ ಸದಸ್ಯ ಮಹೇಶ ಗುಬ್ಬಿ, ಕೆಎಂಎಫ್ ನಿರ್ದೇಶಕ ಹನಮಂತಗೌಡ ಭರಮಣ್ಣನವರ, ತಿರಕಪ್ಪ ಕರಡೇರ, ಮಂಜಣ್ಣ ಮಾಸೂರು, ಯುಟಿಪಿ ಅಧಿಕಾರಿ ಹನಮಂತಪ್ಪ ಯು., ರವಿಕುಮಾರ, ಆನಂದಪ್ಪ ಕೆಂಗಣ್ಣನವರ, ಜೋಕನಾಳ, ಪರ್ವತಸಿದ್ದಗೇರಿ, ಕಣವಿಸಿದ್ದಗೇರಿ ಮತ್ತು ಕಡೂರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಬೀರೇಶ ಕರಡಣ್ಣನವರ ನಿರ್ವಹಿಸಿದರು.