ಬಸ್‌ಗೆ ಕಲ್ಲೊಡೆದವರ ವಿರುದ್ಧ ಕ್ರಮ

crime
Published on

ಹುಬ್ಬಳ್ಳಿ: ಇಲ್ಲಿಯ ಗದಗ ರಸ್ತೆಯ ರಿಂಗ್ ರೋಡ್ ಬಳಿ ಕೆಕೆಆರ್‌ಟಿಸಿ ಬಸ್ ಮೇಲೆ ದಾಳಿ ನಡೆಸಿದ್ದ ಇಬ್ಬರ ವಿರುದ್ಧ ಕೇಶ್ವಾಪುರ ಠಾಣೆ ಪೊಲೀಸರು ಕ್ರಮ ಜರುಗಿಸಿದ್ದಾರೆ.

ಬಸ್ ಚಾಲಕನಿಗೆ ಬೆದರಿಕೆ, ಕರ್ತವ್ಯಕೆಕ ಅಡ್ಡಿ, ಬಸ್ ಮುಂಭಾಗದ ಗಾಜು ಒಡೆದು 12 ಸಾವಿರ ರೂ. ಮೌಲ್ಯದ ವಸ್ತು ನಷ್ಟಪಡಿಸಿದ್ದರಿಂದ ವಾಕರಸಾ ಸಂಸ್ಥೆ ನಿರ್ವಾಹಕರಾದ ಮಂಜುನಾಥ, ಮಹಾದೇವಪ್ಪ ವಿರುದ್ಧ ಕ್ರಮ ಜರುಗಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net