ನಿಯಮ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ

PHOTO-4-04
Published on

ನಿಯಮ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ

ಚಿತ್ರದುರ್ಗ: ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಗ್ರಾಮೀಣ ಕ್ರೀಡಾಕೂಟಗಳ ಸ್ಪರ್ಧೆಯಲ್ಲಿ ನಿಯಮಗಳನ್ನು ಉಲ್ಲಂ ಘಿಸಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಕಾರ‌್ಯಕರ್ತರು ಡಿಸಿಗೆ ಗುರುವಾರ ಮನವಿ ಸಲ್ಲಿಸಿದರು.

ಜಿಲ್ಲೆಯ ಕೆಲವು ತಾಲೂಕುಗಳಿಗೆ ಮಾತ್ರ ಕ್ರೀಡಾಕೂಟದ ಮಾಹಿತಿ ಹೋಗಿದ್ದು, ಉಳಿದವರು ವಂಚಿತರಾಗಿದ್ದಾರೆಂದು ಜಿಲ್ಲಾಡಳಿತದ ಗಮನಕ್ಕೆ ತಂದರು. ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಎ.ತಾಳೀಕೆರೆ, ಹೊಳೆಯಪ್ಪ, ಪಿ.ರಮೇಶ್, ಕೆ.ಪಿ.ಶ್ರೀನಿವಾಸ್, ಟಿ.ರಾಜ, ಮಂಜುನಾಥ, ಹಾಲೇಶ್, ಚಂದ್ರಪ್ಪ ಘಾಟ್ ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net