ಕಿರುಕುಳ ನೀಡುವ  ಫೈನಾನ್ಸ್  ವಿರುದ್ಧ ಕ್ರಮ

27NDR2
Published on

ನಂದೇಶ್ವರ: ರಾಜ್ಯದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವ ಫೈನಾನ್ಸ್ ವಿರುದ್ಧ ರಾಜ್ಯ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಅಥಣಿ ತಾಲೂಕಿನಲ್ಲಿ ಪ್ರಕರಣ ಕಂಡು ಬಂದರೆ ಫೈನಾನ್ಸ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಸತ್ತಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 10 ಲಕ್ಷ ರೂ.ಗಳ ಶ್ರೀಸೀತಾರಾಮ ದೇವಸ್ಥಾನದ ಸಮುದಾಯ ಭವನ ಹಾಗೂ ಶ್ರೀಸದಾಶಿವ ಮುತ್ಯಾ ದೇವಸ್ಥಾನದ 10 ಲಕ್ಷ ರೂ. ಗಳ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸತ್ತಿ ಗ್ರಾಮ ಅನೇಕ ಐತಿಹಾಸಿಕ ದೇವಸ್ಥಾನಗಳನ್ನು ಹೊಂದಿದೆ. ಹಂತ ಹಂತವಾಗಿ ಪ್ರತಿಯೊಂದು ಐತಿಹಾಸಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಜರುಗುವ ಚಾತುರ್ಮಾಸ ಕಾರ್ಯಕ್ರಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಹಿರಿಯ ಮುಖಂಡರಾದ ಸೊನೋಪಂತ ಕುಲಕರ್ಣಿ, ಡಾ.ರಾಮ ಕುಲಕರ್ಣಿ, ಸುಭಾಸ ದಾತಾರ, ಆನಂದರಾವ ದೇಶಪಾಂಡೆ, ಎನ್.ಕೆ.ಆಯಾಚಿತ, ಶ್ರೀನಿವಾಸ ಕುಲಕರ್ಣಿ, ಜಡೇಪ್ಪ ಕುಂಬಾರ, ಶೇಷಗಿರಿ ಕುಲಕರ್ಣಿ, ಶಿವರುದ್ರಯ್ಯ ಬಬಲಾದಿಮಠ, ಪ್ರಕಾಶ ಭೂಷಣ್ಣವರ, ಸಂತೋಷ ಕುಲಕರ್ಣಿ, ಪ್ರಕಾಶ ಬ್ಯಾಳಗೌಡರ, ಹನುಮಂತ ಜಗದೇವ, ಉಮರ ತಾಸಗಾಂವ, ಈರಣ್ಣ ವಾಲಿ, ಪಿಡಿಒ ಭುವನೇಶ್ವರಿ ಹಿರೇಮಠ, ಶಿವಾನಂದ ದಿವಾನಮಳ, ಶ್ರೀಶೈಲ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net