ಗೋವು ಅಪಹರಣಕಾರರ ವಿರುದ್ಧ ಕ್ರಮಕೈಗೊಳ್ಳಿ, ಜಾಲಿ ಸಾರ್ವಜನಿಕರಿಂದ ಡಿವೈಎಸ್​ಪಿಗೆ ಮನವಿ

18bkl1- MANAVAI
Published on

ಭಟ್ಕಳ: ತಾಲೂಕಿನಲ್ಲಿ ಗೋವು ಕಳ್ಳತನ, ಹತ್ಯೆಯಂಥಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಗೋವು ಅಪಹರಣಕಾರರ ವಿರುದ್ಧ ಪೊಲೀಸರ ಕ್ರಮ ಕೈಗೊಳ್ಳಬೇಕು ಎಂದು ಜಾಲಿಯ ನಾಗರಿಕರು ಭಟ್ಕಳ ನಗರ ಠಾಣೆ ವೃತ್ತ ನಿರೀಕ್ಷಕರ ಮೂಲಕ ಡಿವೈಎಸ್​ಪಿಗೆ ಮನವಿ ಸಲ್ಲಿಸಿದ್ದಾರೆ
ಜಾಲಿ ಭಾಗದಲ್ಲಿ ಅತಿ ಹೆಚ್ಚು ಜನರು ಗೋವುಗಳ ಮೇಲೆ ಅವಲಂಬಿತರಾಗಿದ್ದು, ಅಂತಹ ಗೋವುಗಳನ್ನು ದುಷ್ಕರ್ವಿುಗಳು ಅಮಲು ಬರುವ ಪದಾರ್ಥ ನೀಡಿ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕದ್ದೊಯ್ಯುತ್ತಿದ್ದಾರೆ. ದಿನೇ ದಿನೆ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಈ ಮೊದಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇದಕ್ಕೂ ಪೂರ್ವ ಭಟ್ಕಳ ಗ್ರಾಮೀಣ ಠಾಣೆಗೂ ತೆರಳಿ ತಮ್ಮ ಊರಿನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು. ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ನಾಯ್ಕ, ವಸಂತ ನಾಯ್ಕ, ಸಂಕೇತ ಆಚಾರಿ, ಉಮೇಶ ನಾಯ್ಕ , ಮಹೇಶ ಮೊಗೇರ, ನಾಗೇಶ ನಾಯ್ಕ ಹೆಬಳೆ, ರಾಘವೇಂದ್ರ ನಾಯ್ಕ, ಕುಮಾರ ನಾಯ್ಕ, ಸಮಸ್ತ ಜಾಲಿ ನಾಗರಿಕರು ಉಪಸ್ಥಿತರಿದ್ದರು

ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ: ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಕಾರಿನಲ್ಲಿ ಬಂದ ಮುಸುಕುಧಾರಿಗಳು ರಸ್ತೆಯಲ್ಲಿದ್ದ ಗೋವನ್ನು ಕದ್ದು ಪಾರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶುಕ್ರವಾರ ಬೆಳಗ್ಗೆ 3.15ರ ಸುಮಾರಿಗೆ ಜಾಲಿ ಬ್ಯಾಂಕ್ ಸಮೀಪ ಕಾರಿನಲ್ಲಿ ಬಂದ ಕಳ್ಳರು ತಮ್ಮ ಗುರುತು ಪತ್ತೆಯಾಗದಂತೆ ಮುಖಕ್ಕೆ ಮುಖಗವಸ ಧರಿಸಿದ್ದರು. ರಸ್ತೆಯಲ್ಲಿದ್ದ ಗೋವಿಗೆ ಆಹಾರ ನೀಡುವ ನೆಪದಲ್ಲಿ ಗೋವಿನ ಸಮೀಪ ಹೋಗಿ ಬಳಿಕ ಅದನ್ನು ಎತ್ತಿ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net