ಅದಮ್ಯ ರಂಗ ಶಾಲೆಯಿಂದ ಅಭಿನಯ ಕಾರ್ಯಾಗಾರ

Drama 6x4
Published on

ಮೈಸೂರು: ಅದಮ್ಯ ರಂಗ ಶಾಲೆಯು ಯುವ ಮತ್ತು ಹಿರಿಯ ನಾಗರೀಕರಿಗೆ ಅಭಿನಯ ಕಾರ್ಯಾಗಾರ ಹಾಗೂ ನಾಟಕ ಪ್ರದರ್ಶನ ಆಯೋಜಿಸಿದೆ.

ಕಳೆದ ಆರು ವರ್ಷಗಳಿಂದ ಮೈಸೂರಿನ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಅದಮ್ಯ ರಂಗ ಶಾಲೆ ಮಕ್ಕಳ ಹಾಗೂ ವಯಸ್ಕರಿಗೆ ಅಭಿನಯ ತರಬೇತಿ ಕಾರ್ಯಾಗಾರ, ನಾಟಕೋತ್ಸವ, ನಾಟಕ ಪ್ರದರ್ಶನ ಹಾಗೂ ಬೇಸಿಗೆ ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿದೆ. ಮುಂದಿನ ಪ್ರಯತ್ನವಾಗಿ ಯುವಕರನ್ನೊಳಗೊಂಡ ಹಿರಿಯರೊಟ್ಟಿಗೆ 30 ದಿನಗಳ ಅಭಿನಯ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಇದೇ ಪ್ರಪ್ರಥಮ ಬಾರಿಗೆ ಹಿರಿಯರೊಟ್ಟಿಗೆ ಕಿರಿಯರು ಸೇರಿ ರಂಗಭೂಮಿಗೆ ಸಂಬಂಧಿಸಿದ ವಿವಿಧ ಮಜಲುಗಳನ್ನು ಕಲಿಯಬಹುದು. 18ರಿಂದ 60 ವಯೋಮಿತಿಯ ಮಹಿಳೆ ಮತ್ತು ಪುರುಷರು ಅಭಿನಯ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದು. ಈ ರಂಗ ತರಬೇತಿ ಶಿಬಿರವು ಮಾರ್ಚ್ 1ರಿಂದ 30 ದಿನಗಳ ಕಾಲ ಪ್ರತಿದಿನ ಸಂಜೆ 6.30ರಿಂದ 8.30ರವರಗೆ ನಡೆಯುತ್ತದೆ ಎಂದು ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 86601 03141, 72040 34040 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net