ಹವ್ಯಾಸಿ ಕಲಾವಿದರಿಗೆ ಅಭಿನಯ ತರಬೇತಿ ಕಾರ್ಯಾಗಾರ

Published on

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗ ಕಲೆಯಲ್ಲಿ ಆಸಕ್ತಿವುಳ್ಳ ಹವ್ಯಾಸಿ ಕಲಾವಿದರಿಗಾಗಿ ಹತ್ತು ದಿನಗಳ ಅಭಿನಯ ಕಾರ್ಯಾಗಾರವನ್ನು ಜ. 22ರಿಂದ ಫೆ. 5ರ ವರೆಗೆ ಆಯೋಜಿಸಿದೆ.

ಹುಬ್ಬಳ್ಳಿಯ ಉದಯ ನಗರದ ಲಕ್ಷ್ಮೀನಾರಾಯಣ ಸಭಾಗ್ರಹದಲ್ಲಿ ಕಾರ್ಯಾಗಾರ ನಡೆಯಲಿದೆ. ಯುವಕರು, ವಿದ್ಯಾರ್ಥಿಗಳು ಹಾಗೂ ನೌಕರಸ್ಥರಿಗೆ ಅನುಕೂಲವಾಗುವ ಹಾಗೆ ಪ್ರತಿ ದಿನ ಸಂಜೆ 6ಕ್ಕೆ ತರಬೇತಿ ನೀಡಲಾಗುವುದು.

ಜ. 22ರಂದು ಸಂಜೆ 6ಕ್ಕೆ ಹಿರಿಯ ನಾಟಕಕಾರ ಹಾಗೂ ನಟ ಡಾ. ಗೋವಿಂದ ಮಣ್ಣೂರ ಅವರು ಕಾರ್ಯಾಗಾರ ಉದ್ಘಾಟಿಸುವರು, ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಅತಿಥಿಗಳಾಗಿ ಆಗಮಿಸುವರು. ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯತೆ ವಹಿಸುವರು.

ಭಾಗವಹಿಸಲು ಆಸಕ್ತರು ಸಂಸ್ಥೆಯ ಕಚೇರಿ, ಚೈತನ್ಯಧಾಮ, ರಾಜಾಜಿನಗರ, ದೇವಾಂಗಪೇಟ, ಹುಬ್ಬಳ್ಳಿ ಅಥವಾ ಕಾರ್ಯದರ್ಶಿ ವೀಣಾ ಅಠವಲೆ ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net