ಸುಳ್ಳದಲ್ಲಿ ಅಭಿನಯ ಕಾರ್ಯಾಗಾರಕ್ಕೆ ಚಾಲನೆ

IMG-20250703-WA0007_1-1.jpg
Published on

ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದಲ್ಲಿ ಸುನಿಧಿ ಕಲಾ ಸೌರಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಅಭಿನಯ- ಅಭಿವ್ಯಕ್ತಿ ಮಕ್ಕಳಿಗಾಗಿ ಉಚಿತ ಅಭಿನಯ ಕಾರ್ಯಾಗಾರ ಆರಂಭಿಸಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಮಾತನಾಡಿದರು.

ಅತಿಥಿಗಳಾಗಿದ್ದ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ಜುಗನ್ ಪಟೇಲ್, ಡಾ. ಗೌತಮ ಜಾಯದೆ, ಕೇತನ ಮಹೇಶ್ವರಿ, ಕಾರ್ಯಾಗಾರಕ್ಕೆ ಮಕ್ಕಳ ಸ್ಪಂದನೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್ ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಗುಡಿಗೇರಿ, ಪ್ರಭಾರಿ ಪ್ರಧಾನ ಗುರು ನಾಡಗೌಡ ಇತರರು ಪಾಲ್ಗೊಂಡಿದ್ದರು.
ವೀಣಾ ಅಠವಲೆ ಕಾರ್ಯಕ್ರಮ ನಿರೂಪಿಸಿದರು. ಸ್ಮೀತಾ ಎಂ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net