ಅಭಿನಯ ತರಬೇತಿ ಶಿಬಿರ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಸುನಿಧಿ ಕಲಾ ಸೌರಭ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ದುರ್ಗಾ ಕಾಲನಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ನ. 11ರಿಂದ 10 ದಿನಗಳ ಕಾಲ ಅಭಿನಯ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ ಶಿಬಿರಕ್ಕೆ ಚಾಲನೆ ನೀಡುವರು. ರಂಗ ತಜ್ಞ ಡಾ. ಶಶಿಧರ ನರೇಂದ್ರ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಆಡಿವೇರ, ಎಸ್​ಡಿಎಂಸಿ ಅಧ್ಯಕ್ಷ ಮಲ್ಲಿಕ ಅಹ್ಮದ್​ ಬಿಸ್ತಿ, ಶಾಲಾ ಪ್ರಧಾನಗುರು ಎನ್​.ಬಿ.ದ್ಯಾಪೂರ, ಶಾಲಾ ಶಿಕ್ಷಕಿ ವಾಣಿಶ್ರೀ ಕುಲಕರ್ಣಿ, ಇತರರು ಅತಿಥಿಗಳಾಗಿ ಆಗಮಿಸುವರು. ರಂಗಕರ್ಮಿ ಸುಭಾಸ ನರೇಂದ್ರ ಉಪಸ್ಥಿತರಿರುವರು. ಸಾಹಿತಿ ನಿಂಗಣ್ಣ ಕುಂಟಿ ಅಧ್ಯಕ್ಷತೆ ವಹಿಸುವರು. ಸಿಕಂದರ್​ ದಂಡಿನ ಮತ್ತು ಶೃತಿ ಹುರಳಿಕೊಪ್ಪ ತರಬೇತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net