ಮಕ್ಕಳ ಸಮಗ್ರ ವ್ಯಕ್ತಿತ್ವಕ್ಕೆ ನಟನೆ ಸಹಕಾರಿ

22-pnp 1
ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಪ್ರದರ್ಶಿಸಿದ ಪಂಚಮವೇದ ನಾಟಕ ಗಮನ ಸೆಳೆಯಿತು.
Published on

ಪಾಂಡವಪುರ: ಜನ ಭಾರತ್ ರಂಗದ ಬೆಳ್ಳಿ ಹಬ್ಬದ ಪ್ರಯುಕ್ತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಮಿನಿಸ್ಟರಿ ಆಫ್ ಕಲ್ಚರ್ ಸಹಕಾರದೊಂದಿಗೆ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.1ರಿಂದ 21 ರವರೆಗೆ ಮಕ್ಕಳ ರಂಗ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಪಂಚ ಪ್ರಾಣ ಎನ್ನಬಹುದಾದ ನಾಟ್ಯ ಶಾಸ್ತ್ರದ ಅಂಗೀಕ, ವಾಚಿಕ, ಆಹಾರ್ಯ, ಸ್ವಾತಿಕ ಹಾಗೂ ನವರಸಗಳಾದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಶಾಂತ, ಅದ್ಭುತ, ಭೀಭತ್ಸ್ಯ ಭಾವ ಮತ್ತು ನಟನೆಯ ಆಯಾಮಗಳನ್ನು ಕಲಿಸಿಕೊಡಲಾಯಿತು. ರಂಗ ತರಬೇತಿ ಪಡೆದ ಮಕ್ಕಳು ರಂಗಭೂಮಿ ನಿರ್ದೇಶಕ ಮಂಡ್ಯ ಪುನೀತ್ ನಿರ್ದೇಶನದ ಹಾಗೂ ಶಾಲಾ ಮುಖ್ಯ ಶಿಕ್ಷಕ ಪ.ಮ.ನಂಜುಂಡಸ್ವಾಮಿ ಸಹಕಾರದಲ್ಲಿ ಪಂಚಮವೇದ ಎಂಬ ನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ರಂಗಭೂಮಿ ನಟ ಮಂಡ್ಯ ಪುನೀತ್ ಮಾತನಾಡಿ, ನಟನೆ ಮಕ್ಕಳ ಶಿಕ್ಷಣ ಮತ್ತು ಸಮಗ್ರ ವ್ಯಕ್ತಿತ್ವ ವಿಕಶನಕ್ಕೆ ದಾರಿದೀಪ. ನಾಟಕದಿಂದ ಮಕ್ಕಳಲ್ಲಿ ಏಕಾಗ್ರತೆ, ಶಿಸ್ತು, ಸಂಯಮ, ಧೈರ್ಯ, ವಾಕ್ಚಾತುರ್ಯ, ನಿರರ್ಗಳತೆ ರೂಪುಗೊಳ್ಳುತ್ತದೆ. ಉತ್ತಮ ಕಲಿಕಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಹೀಗಾಗಿ ಮಕ್ಕಳು ರಂಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಂಗಭೂಮಿ ನಿರ್ದೇಶಕ ಮೇಲುಕೋಟೆ ಗಿರೀಶ್ ನಾಟಕಕ್ಕೆ ಪ್ರಸಾದನ ಹಾಗೂ ರಂಗ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಲಾವಣ್ಯ, ಶಿಕ್ಷಕ ಜಯರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net