ಸುಸ್ಥಿರ ಮಣ್ಣಿನ ಆರೋಗ್ಯ ಮತ್ತು ಜೀವನೋಪಾಯ ಸುರಕ್ಷತೆಗಾಗಿ ಕಾರ್ಯಗಾರ

AGRI PROGRAM
AGRI PROGRAM
Published on

ರಾಯಚೂರು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ತಾಂತ್ರಿಕ ಸಾಧನೆ ಕುರಿತು ವಿವಿಧ ರಾಜ್ಯಗಳ ಕೃಷಿ ಸಂಶೋಧನೆ ಸಂಸ್ಥೆ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಮ್ಮ ಸಲಹೆ ಸೇರಿದಂತೆ ಈ ಕೃಷಿಗಳಲ್ಲಿ ಆಗುವ ಬದಲಾವಣೆ ಕುರಿತು ಚರ್ಚೆ ಮಾಡಿ ತಮ್ಮಲ್ಲಿರುವ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳಬೇಕೆAದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮAತಪ್ಪ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾವಯವಕೃಷಿ ಸಂಶೋಧನಾ ಸಂಸ್ಥೆಯ ಸಭಾAಗಣದಲ್ಲಿ ಸೋಮವಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಸಾವಯವಕೃಷಿ ಸಂಶೋಧನಾ ಸಂಸ್ಥೆ, ಮತ್ತು

ಭಾರತೀಯ ಕೃಷಿ ಸಂಶೋದನಾ ಪರಿಷತ್ತು(ಐಸಿಎಆರ್) ವತಿಯಿಂದ -É.೧೭ ರಿಂದ ಮಾ.೯ರವರೆಗೆ ಸುಸ್ಥಿರ ಮಣ್ಣಿನ ಆರೋಗ್ಯ ಮತ್ತು ಜೀವನೋಪಾಯ ಸುರಕ್ಷತೆಗಾಗಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ತಾಂತ್ರಿಕ ಸಾಧನೆ, ಸಂಶೋಧನಾ ಆದ್ಯತೆ ಮತ್ತು ಭವಿಷ್ಯದ ತಂತ್ರಗಳ ಕುರಿತು ಐಸಿಎಆರ್ ಪ್ರಾಯೋಜಿತ ಶಾಲೆಯ ಉದ್ಘಾಟನಾ

ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ನೈಸರ್ಗಿಕ ಹಾಗೂ ಸಾವಯವ ಕೃಷಿ ಅತ್ಯಂತ ಮುಖ್ಯವಾಗಿದ್ದು, ಈ ಕೃಷಿ ಪದ್ದತಿಗಳ ಕುರಿತು ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಮಾಡಲಾದ ಸಂಶೋಧನೆಗಳು ಹಾಗೂ ಸಾಧನೆಗಳ ಕುರಿತು ೨೧ ದಿನಗಳ ಕಾಲ

ನಡೆಯುವ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ನೈಸರ್ಗಿಕ ಹಾಗೂ ಸಾವಯವಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಸಹಕಾರಿಯಾಗಲಿದೆ ಎಂದರು.

ಬದಲಾಗುವ ಹವಾಮಾನದಿಂದ ಕೃಷಿ ವಲಯಕ್ಕೆ ಆಗುವ ಅಪಾಯಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿ ಯಾವ ಸ್ಥಳದಲ್ಲಿ ಮತ್ತು ಯಾವ ಕಾಲದಲ್ಲಿ ನೈಸರ್ಗಿಕ ಹಾಗೂ ಸಾವಯವಕೃಷಿ ಮಾಡುವುದು ಉತ್ತಮ, ಈ ಕೃಷಿ ಪದ್ದತಿ ಅಳವಡಿಕೆ ಎದುರಾಗುವ ಸವಾಲುಗಳು, ಮಣ್ಣಿನ ಆರೋಗ್ಯ, ಮಣ್ಣಿನಲ್ಲಿರುವ ರಾಸಾಯನಿಕ ಹಾಗೂ ಸಾವಯವ ಗುಣಗಳ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕೃಷಿಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಸೇರಿದಂತೆ ಇನ್ನೂ ಹೆಚ್ಚಿನ ವಿಷಯಗಳ ಕುರಿತು ತಮ್ಮಲ್ಲಿರುವ ಜ್ಞಾನ ಹಾಗೂ ಆಲೋಚನೆಗಳನ್ನು ಪರಸ್ಪರ ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಬೇಕು. ಮಣ್ಣಿನ ಆರೋಗ್ಯ ಮತ್ತು ಪೌಷ್ಠಿಕ ಆಹಾರ ಉತ್ಪಾಧನೆ ಕುರಿತು ಉತ್ತಮ ಯೋಜನೆ ರೂಪಿಸಬೇಕು ಎಂದರು.

ಈ ಸಂದರ್ಭ ದಲ್ಲಿ ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯುದ ವಿಶ್ರಾಂತ ಕುಲಪತಿ ಡಾ.ಡಿ.ಬಿ.ಬಿರಾದಾರ, ಬಳ್ಳಾರಿಯ ಭಾರ ತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡಾ.ಬಿ.ಕೃಷ್ಣ ರಾವ್, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎನ್.ಶಿವಶಂಕರ, ತರಬೇತಿ ನಿರ್ದೇಶಕ ಎಂ.ಎ ಬಸವಣ್ಣೆಪ್ಪ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net