ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರ ಜುಲೈ 2ರಿಂದ

Published on

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ಸುಳ್ಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಜುಲೈ 2ರಿಂದ 9ರ ವರೆಗೆ ಅಭಿನಯ-ಅಭಿವ್ಯಕ್ತಿ ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರ ಆಯೋಜಿಸಲಾಗಿದೆ.

ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಉದ್ಘಾಟಿಸುವರು. ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸುವರು.

ಹುಬ್ಬಳ್ಳಿ ರೋಟರಿ ಕ್ಲಬ್‌ನ ಡಾ. ಜುಗನ ಪಟೇಲ, ಡಾ. ಗೌತಮ ಜಾಯದೆ, ಕೇತನ ಮಹೇಶ್ವರಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಗುಡಗೇರಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಭಾರ ಪ್ರಧಾನ ಗುರುಗಳಾದ ಬಿ.ಎಸ್. ನಾಡಗೌಡ ಉಪಸ್ಥಿತರಿರುವರು.
ಗಂಗಾ ಕಾಳೇನವರ ಕಾರ್ಯಾಗಾರ ನಿರ್ವಹಣೆ ಮಾಡುವರು ಎಂದು ಕಾರ್ಯದರ್ಶಿ ವೀಣಾ ಅಠವಲೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net