ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಿ

Act without disturbing law and order.
ಲೋಕಾಪುರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಪಿಎಸ್‌ಐ ಕೆ.ಬಿ. ಜಕ್ಕನ್ನವರ ಮಾತನಾಡಿದರು. ರಫೀಕ ಭೈರಕದಾರ, ಯಮನಪ್ಪ ಹೊರಟ್ಟಿ, ಚನ್ನಯ್ಯ ಗಣಾಚಾರಿ, ಹಸನಡೋಂಗ್ರಿ ಮಹಾಲಿಂಗಪೂರ ಮತ್ತಿತರರಿದ್ದಾರೆ.
Published on

ಲೋಕಾಪುರ: ಹೋಳಿ ಹಾಗೂ ರಂಜಾನ್ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಬಾಂಧವರು ಸೌಹಾರ್ದದಿಂದ ಆಚರಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕೆಂದು ಪಿಎಸ್‌ಐ ಕೆ.ಬಿ. ಜಕ್ಕನ್ನವರ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಮೊದಲಿನಿಂದಲೂ ಹಿಂದು ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದ ನೆಲೆಸಿದೆ. ಮುಂದೆಯೂ ಶಾಂತಿ ಸೌಹಾರ್ದಕ್ಕೆ ಧಕ್ಕೆ ಬಾರದಂತೆ ಹಬ್ಬಗಳನ್ನು ಆಚರಿಸಬೇಕು. ಹೋಳಿ ಹಬ್ಬದ ಕಾಮದಹನದ ವೇಳೆ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. ಹೋಳಿ ಆಡುವಾಗ ನೈಸರ್ಗಿಕ ಬಣ್ಣ ಬಳಕೆ ಮಾಡಿ ಎಂದರು.

ಗಣಿ ಉದ್ಯಮಿ ಯಮನಪ್ಪ ಹೊರಟ್ಟಿ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ತಾಪಂ ಮಾಜಿ ಸದಸ್ಯ ರಫೀಕ ಭೈರಕದಾರ ಮಾತನಾಡಿ, ರಂಜಾನ್‌ಎಂದರೆ ಮುಸ್ಲಿಮರಿಗೆ ದೊಡ್ಡ ಹಬ್ಬ. ಸ್ನೇಹ, ಶಾಂತಿ, ಶ್ರದ್ಧೆ, ಭಕ್ತಿ ಮತ್ತು ಸೌಹಾರ್ದದ ಸಮ್ಮಿಲನವಾಗಿ ಇದನ್ನು ಆಚರಿಸಲಾಗುತ್ತದೆ ಎಂದರು.

ಯುವ ಮುಖಂಡ ಕುಮಾರ ಕಾಳಮ್ಮನವರ ಮಾತನಾಡಿ, ಹಬ್ಬಗಳು ಆಯಾ ಸಮುದಾಯಕ್ಕೆ ಸೀಮಿತವಾಗದೆ ಪ್ರತಿಯೊಬ್ಬರೂ ಸೌಹಾರ್ದದಿಂದ ಆಚರಣೆ ಮಾಡಿದಾಗ ಮಾತ್ರ ಅರ್ಥ ಬರುತ್ತದೆ. ಹೋಳಿ ಹಬ್ಬವನ್ನು ಎಲ್ಲ ಸಮುದಾಯದವರು ಶಾಂತಿಯಿಂದ ಆಚರಿಸಬೇಕು ಎಂದರು.

ಗುಲಾಬಸಾಬ ಅತ್ತಾರ, ಮುತ್ತಪ್ಪ ಚೌಧರಿ, ಚನ್ನಯ್ಯ ಗಣಾಚಾರಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಡೋಂಗ್ರಿ ಮಹಾಲಿಂಗಪೂರ, ಗಣಪತಿ ಗಸ್ತಿ, ಲೋಕಣ್ಣ ಉಳ್ಳಾಗಡ್ಡಿ, ದುರಗಪ್ಪ ಮಾದರ, ಕೆ.ಕೆ. ಭಾಗವಾನ, ಜಾಕೀರ ಅತ್ತಾರ, ಸುರೇಶ ಪೂಜಾರಿ, ಗೊಡಚಯ್ಯ ಗಣಾಚಾರಿ, ಅಬ್ದುಲ್ ರೆಹೆಮಾನ್ ತೊರಗಲ್, ಸಾದೀಕ ಪಠಾಣ, ಗೋಪಾಲ ಲಮಾಣಿ, ಆರ್.ಬಿ.ರಾಮದುರ್ಗ, ಜಿ.ಎಂ.ಕ್ಯಾಥನ್, ಅಶೋಕ ಪರೀಟ್, ಎಸ್.ಎಸ್. ಗಂಗಾಯಿ, ಆರ್.ಕೆ. ತಳವಾರ, ಬಿ.ಬಿ. ಕರೆಪ್ಪಗೋಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net