

ಎನ್.ಆರ್.ಪುರ: ಇನ್ನರ್‌ವೀಲ್ ಸಂಸ್ಥೆಯ ಸದಸ್ಯರು ಬಡವರು, ಅನಾಥರಿಗೆ ಸಹಾಯ ಹಸ್ತ ಚಾಚಬೇಕು ಎಂದು ಇನ್ನರ್‌ವೀಲ್ ಸಂಸ್ಥೆ 313 ರ ಜಿಲ್ಲಾ ಛೇರ್ಮನ್ ವೈಶಾಲಿ ಕುಡ್ವ ಸಲಹೆ ನೀಡಿದರು.
ತಾಲೂಕು ಇನ್ನರ್‌ವೀಲ್‌ಗೆ ಅಧಿಕೃತ ಭೇಟಿ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವರ್ಷ ಇನ್ನರ್‌ವೀಲ್ ಸಂಸ್ಥೆಯು ಮಾನವೀಯತೆ ಹೃದಯ ಬಡಿತ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಂತೆ ಪ್ರತಿಯೊಬ್ಬ ಯಶಸ್ವಿ ಮಹಿಳೆ ಹಿಂದೆಯೂ ಒಬ್ಬ ಪುರುಷ ಇರುತ್ತಾನೆ. ಇನ್ನರ್ ಸಂಸ್ಥೆಯುವರು ರೋಟರಿ ಸಂಸ್ಥೆಯ ಸಹಕಾರ ಪಡೆದು ಮೌಲ್ಯಯುತ ಕಾರ್ಯಕ್ರಮ ರೂಪಿಸಬೇಕು. ಆತ್ಮ ತೃಪ್ತಿಗಾಗಿ ಕೆಲಸ ಮಾಡಬೇಕು. ವರ್ಷದಲ್ಲಿ ಕಡಿಮೆ ಕಾರ್ಯಕ್ರಮ ಮಾಡಿದರೂ ಎಲ್ಲರೂ ನೆನಪಿನಲ್ಲಿ ಇಡುವಂತಹ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.
ಗುಳದಮನೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಿಂಟರ್ ವಿತರಿಸಲಾಯಿತು. ಇನ್ನರ್‌ವೀಲ್‌ಸಂಸ್ಥೆ ಅಧ್ಯಕ್ಷೆ ಬಿಂದು ವಿಜಯ, ಡಾ.ಭಾವನಾ, ಕಾರ್ಯದರ್ಶಿ ರಾಧಿಕ ಅರ್ಜುನ್, ಖಜಾಂಚಿ ನೀತಾ ಪ್ರದೀಪ್, ರೋಟರಿ ಅಧ್ಯಕ್ಷ ದಿವಾಕರ್ ಇದ್ದರು.