ಸಾರ್ವಜನಿಕರ ಅರ್ಜಿ ವಿಲೇಗೆ ಶೀಘ್ರ ಕ್ರಮಕೈಗೊಳ್ಳಿ

14 nrp 2 (1)
ಎನ್.ಆರ್.ಪುರದಲ್ಲಿ ನಡೆದ ಲೋಕಾಯುಕ್ತ ಅಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ಡಿವೈಎಸ್‌ಪಿ ಜೆ.ಜೆ.ತಿರುಮಲೇಶ್ ಮಾತನಾಡಿದರು. ಎಚ್.ಡಿ.ನವೀನ್‌ಕುಮಾರ್, ತನುಜ.ಟಿ.ಸವದತ್ತಿ ಇದ್ದರು.
Published on

ಎನ್.ಆರ್.ಪುರ: ಸರ್ಕಾರಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅರ್ಜಿಯನ್ನು ಸಕಾರಣವಿಲ್ಲದೆ ವಿಳಂಬ ಮಾಡದೆ ತಕ್ಷಣ ಸ್ಪಂದಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಜೆ.ಜೆ.ತಿರುಮಲೇಶ್ ಹೇಳಿದರು.
ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕಾರಣವಿಲ್ಲದೆ ಸಾರ್ವಜನಿಕರ ಅರ್ಜಿಯನ್ನು ತಿಂಗಳುಗಟ್ಟಲೆ ಇಟ್ಟುಕೊಳ್ಳುವುದು ತಪ್ಪು . ಇದು ಲೋಕಾಯುಕ್ತ ಕಾನೂನು ವ್ಯಾಪ್ತಿಗೆ ಬರಲಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಪ್ರತಿ ತಿಂಗಳು ತನಿಖೆ ನಡೆಸಿ ಅರ್ಜಿ ಏಕೆ ವಿಳಂಬವಾಗುತ್ತಿದೆ ಎಂದು ವಿಮರ್ಶೆ ಮಾಡಿಕೊಳ್ಳಬೇಕು. ಹಲವು ಅರ್ಜಿಗಳು ಕಾರಣವಿಲ್ಲದೆ ವರ್ಷದಿಂದ ಬಾಕಿ ಇದೆ. ಇಂದು ಸಾರ್ವಜನಿಕರಿಂದ ಒಂಭತ್ತು ಅರ್ಜಿಗಳು ಬಂದಿದೆ. ಕಳೆದ ಆರು ತಿಂಗಳ ಹಿಂದೆ ತಾಲೂಕು ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಬಂದ ದೂರುಗಳು ಹಾಗೇ ಉಳಿದಿವೆ. ಇದು ಹೀಗೆ ಮುಂದುವರಿದರೆ ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕರು ಕಂದಾಯ, ಅರಣ್ಯ ಇಲಾಖೆಯ ವಿವಿಧ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿದರು. ಜಿಲ್ಲಾ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಿ.ಮಲ್ಲಿಕಾರ್ಜುನ, ತಹಶೀಲ್ದಾರ್ ತನುಜ.ಟಿ.ಸವದತ್ತಿ, ಇಒ ಎಚ್.ಡಿ.ನವೀನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net