ಸೌಜನ್ಯದಿಂದ ವರ್ತಿಸಲಿ

web3
ಯಲ್ಲಮ್ಮವಾಡಿ ಗ್ರಾಮದಲ್ಲಿ 4 ಲಿಂಕ್‌ಲೈನ್‌ಗಳಿಗೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಸಣ್ಣಕ್ಕಿ ಚಾಲನೆ ನೀಡಿದರು. ಪಾರೀಸ್ ಶಿವಣ್ಣವರ, ಎಂ.ಎಸ್.ನವಣಿ ಇತರರಿದ್ದರು.
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಯಲ್ಲಮ್ಮವಾಡಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ಸಮರ್ಪಕ ವಿದ್ಯುತ್ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಅಥಣಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಸಣ್ಣಕ್ಕಿ ಹೇಳಿದರು.

ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 4 ಲಿಂಕ್‌ಲೈನ್‌ಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಝುಂಜರವಾಡ, ಸುಟ್ಟಟ್ಟಿ, ಯಲ್ಲಮ್ಮವಾಡಿ, ಕೊಡಗಾನೂರ ಗ್ರಾಮಗಳ 5 ಸಾವಿರಕ್ಕೂ ಹೆಚ್ಚಿನ ರೈತರಿಗೆ ಸಮರ್ಪಕ ವಿದ್ಯುತ್ ದೊರೆಯಲಿದೆ. ಪವರ್‌ಮ್ಯಾನ್ ಸೇರಿ ಇಲಾಖೆ ನೌಕರರೊಂದಿಗೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.

ಐಗಳಿ ಹೆಸ್ಕಾಂ ಅಭಿಯಂತ ಪಾರೀಸ್ ಶಿವಣ್ಣವರ ಮಾತನಾಡಿ, ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು. ಶಾಖಾಧಿಕಾರಿ ಎಂ.ಎಸ್.ನವಣಿ, ಮೇಲ್ವಿಚಾರಕ ಸಿ.ಕೆ.ಹಿರೇಮಠ, ಪ್ರಶಾಂತ ನಾಯಕ್, ಲೈಮನ್‌ಗಳಾದ ಐ.ಡಿ.ಬಿರಾದಾರ, ಎಲ್.ಎನ್.ಪವಾರ, ಎಸ್.ಜೆ.ಮುಲ್ಲಾ, ಜಿ.ಎ.ಕುಂಟಾಜಿ, ಡಿ.ಬಿ.ಐಗಳಿ, ಎಸ್.ಕೆ.ಹಾರೂಗೇರಿ, ಎಂ,.ಎನ್.ಎಮ್ಮಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net