15 ಎಕರೆ ಹುಲ್ಲಿನ ಬಣವೆ ಭಸ್ಮ

Published on

ಕಾರಟಗಿ: ಅಗ್ನಿ ಅವಘಡಕ್ಕೆ 15 ಎಕರೆ ಭತ್ತದ ಬಣವೆ ಹಾಗೂ ಶೆಡ್ ಸುಟ್ಟು ಭಸ್ಮವಾಗಿದ್ದು, ಶೆಡ್‌ನಲ್ಲಿದ್ದ ಎರಡು ಎಮ್ಮೆಗಳಿಗೆ ಬೆಂಕಿ ತಗುಲಿ ಗಾಯಗೊಂಡ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಬಸನಗೌಡ ಸುಂಕದ್ ಹಾಗೂ ವೀರೇಶ ಸುಂಕದ್ ಎನ್ನುವವರಿಗೆ ಸೇರಿದ ಬಣವೆ ಸುಟ್ಟಿವೆ. ಎರಡು ಎಮ್ಮೆಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವಿಷಯ ತಿಳಿದ ಕಾರಟಗಿ ಅಗ್ನಿ ಶಾಮಕ ದಳ ಭೇಟಿ ನೀಡಿ, ಬೆಂಕಿ ನಂದಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net