ಸತ್ಪ್ರಜೆಯಾಗಲು ಜ್ಞಾನ ಸಂಪಾದಿಸಿ

30 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯೆಗೆ ವಿನಯವೇ ಭೂಷಣ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಿಗೆ ಉತ್ತೀರ್ಣತೆ ಹೊಂದಲು ವಿದ್ಯಾರ್ಜನೆ ಮಾಡದೆ ಜೀವನದ ಮೌಲ್ಯಗಳನ್ನು ರೂಪಿಸಿಕೊಂಡು ಸಮಾಜದ ಸತ್ಪ್ರಜೆಯಾಗಲು ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಡಾ. ಎಸ್​.ಎಂ. ಶಿವಪ್ರಸಾದ ಹೇಳಿದರು.
ನಗರದ ಜೆಎಸ್​ಎಸ್​ನ ಆರ್​. ಎಸ್​. ಹುಕ್ಕೇರಿಕರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವ್ಯಕ್ತಿಯ ನಡೆ-ನುಡಿಗಳು ಆತನ ಸಂಸ್ಕೃತಿ ಬಿಂಬಿಸುತ್ತವೆ. ಶರೀರವೆಂಬುದು ದೇವರು ನಮಗೆ ತಾಯಿಯ ಮೂಲಕ ಕೊಟ್ಟಿರುವ ಕಾಣಿಕೆ. ಶರೀರದಲ್ಲಿನ ವಿವಿಧ ಅವಯವಗಳು ಅದ್ಭುತ ಶಕ್ತಿ ಹೊಂದಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು.
ಅಧ್ಯಕ್ಪತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಭಾರತಿ ಶಾನಭಾಗ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.
2023-24ನೇ ಸಾಲಿನ ಪ್ರಥಮ ಹಾಗೂ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮತ್ತು ನೀಟ್​, ಜೆಇಇ, ಕೆ-ಸೆಟ್​ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಡಾ. ಎಸ್​.ಕೆ.ಪಾಟೀಲ,ಬಾಹುಬಲಿ ಚೌಗಲಾ, ಚಂದನಾ ಅಂಗಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net