

ಚಿತ್ರದುರ್ಗ: ಲೆಕ್ಕ-ಪತ್ರ ಸರಿಯಾಗಿದ್ದರೆ ಸಹಕಾರ ಸಂಘದ ಆಡಳಿತ ಉತ್ತಮವಾಗಿರುತ್ತದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಚ್.ಎಂ.ದ್ಯಾಮಣ್ಣ ಕೋಗುಂಡೆ ಹೇಳಿದರು. ರಾಜ್ಯಸಹಕಾರ ಮಹಾಮಂಡಲ,ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಚಿತ್ರದುರ್ಗ ತಾಲೂಕು ಸಹಕಾರ ಸಂಘಗಳ ಆಶ್ರಯದಲ್ಲಿ ನಗರದ ಸಹಕಾರ ಭವನದಲ್ಲಿ ಸೋಮವಾರ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹ ಕಾರ ಸಪ್ತಾಹ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸಹಕಾರಿಗಳಿಗೆ ಶಿಕ್ಷಣ ನೀಡುವುದು ಜಿಲ್ಲಾ ಯೂನಿಯನ್ ಕರ್ತವ್ಯ ವಾಗಿದೆ.
ಕಾಲಕಾಲಕ್ಕೆ ಆಗುವ ಸಹಕಾರಿ ಕಾನೂನು ತಿದ್ದುಪಡಿಗಳ ಕುರಿತು ಸಹಕಾರ ಸಂಘಗಳ ಅಧ್ಯಕ್ಷರು,ಕಾರ‌್ಯದರ್ಶಿಗಳಿಗೆ ಜಾಗೃತಿ ಮೂಡಿ ಸುವ ಕೆಲಸವನ್ನು ಯೂನಿಯನ್ ಮಾಡಲಿದೆ. ಈ ಸಂಘಗಳ ವಹಿವಾಟಿನ ಡಿಜಿಟಲೀಕರಣಕ್ಕೆ ಕೇಂದ್ರ ವಿಶೇಷ ಆಸಕ್ತಿ ವಹಿಸಿದೆ ಎಂದರು. ಸಹಕಾರ ಇಲಾಖೆ ಉಪ ನಿರ್ದೇಶಕ ಮಹಮ್ಮದ್ ಅಬೀಬ್ ಹುಸೇನ್ ಮಾತನಾಡಿ,ಸಹಕಾರ ಸಂಘಗಳಲ್ಲಿ ಲೆಕ್ಕ ಪರಿಶೋಧನೆ ಸರಿಯಾಗಿ ಆಗುತ್ತಿಲ್ಲ. ಲೆಕ್ಕ ಸರಿ ಇದ್ದರೆ ಸಂಘದ ಲಾಭ-ನಷ್ಟದ ಚಿತ್ರಣ ಸ್ಪಷ್ಟವಾಗಿ ತಿಳಿಯಲಿದೆ ಎಂದರು.
ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಮೂರ್ತಿ ಮಾತನಾಡಿ,ದೇಶದ ಜನ ಸಂಖ್ಯೆಯಲ್ಲಿ ಶೇ.30 ಜನರು ಸಹಕಾರಿ ಕ್ಷೇತ್ರದಲ್ಲಿ ಇದ್ದಾರೆ ಎಂದು ವಿಷಾದಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಧು ಶ್ರೀನಿವಾಸ್ ಮಾತನಾಡಿ,ಯಶಸ್ವಿನಿ ನೋಂದಣಿಗೆ ಡಿಸೆಂಬರ್ 31 ಕೊನೆ ದಿನವಾಗಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿ. ಚನ್ನಕೇಶವ ಉಪನ್ಯಾಸ ನೀಡಿದರು.
ಯೂನಿಯನ್ ನಿರ್ದೇಶಕರಾದ ರಾಮರೆಡ್ಡಿ,ಎಸ್.ಆರ್.ಗಿರೀಶ್,ಶಿವಪ್ರಕಾಶ್,ಜಿಂಕಲ್ ಬಸವರಾಜು,ಅಜ್ಜಪ್ಪ,ಜಗನ್ನಾಥ್,ಮಹಾ ಂತೇಶ್,ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥಪ್ಪ,ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರವಿಕುಮಾರ್,ರಾಜ್ಯ ಸಹಕಾರ ಖಾದಿಯೇತರ ಉಣ್ಣೆ ಕೈ ಮಗ್ಗ ನೇಕಾರರ ಮಹಾ ಮಂಡಳದ ಅಧ್ಯಕ್ಷ ಜಯರಾಂ,ಜಿಲ್ಲಾ ತೋಟದ ಬೆಳೆಗಾರರ ಮತ್ತು ಸಂಸ್ಕರಣೆ ಸಹಕಾರ ಸಂಘದ ಅಧ್ಯಕ್ಷ ಕೆಂಚ ವೀರಪ್ಪ,ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲ ಷರೀಫ್ ಮತ್ತಿತರರು ಇದ್ದರು.
(ಸಿಟಿಡಿ 14 ಸಹಕಾರ ಸಪ್ತಾಹ)
ಚಿತ್ರದುರ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ಸಹಕಾರ ಸಪ್ತಾಹ ಕಾರ‌್ಯಕ್ರಮದಲ್ಲಿ ದ್ಯಾಮಣ್ಣ ಕೋಗುಂಡೆ ಮಾತನಾಡಿದರು. ಸಿಡಿಸಿಸಿ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲ ಷರೀಫ್,ಮಹಮ್ಮದ್ ಅಬೀಬ್ ಹುಸೇನ್,ಎಚ್.ಮೂರ್ತಿ,ಮಧುಶ್ರೀನಿವಾಸ್,ಡಾ.ಸಿ.ಚನ್ನಕೇಶವ,ರಾಮರೆಡ್ಡಿ,ಎಸ್.ಆರ್.ಗಿರೀಶ್ ಮತ್ತಿತರರು ಇದ್ದರು.
------