ಅಪಘಾತ: ತಂದೆ ಮಗ ಸಾವು

20230928_164426
Published on

ಗದಗ:
ಸಾರಿಗೆ ಸಂಸ್ಥೆಯ ಬಸ್​ ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ ಟನೆ ಗುರುವಾರ ತಾಲೂಕಿನ ಲಕ್ಕುಂಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ. ಮೃತರನ್ನು ಹೊಸಪೇಟೆ ನಿವಾಸಿಗಳಾದ ಬಾಲರಾಜ(85) ಹಾಗೂ ವಿನಯ್​(28) ಎಂದು ಗುರುತಿಸಲಾಗಿದೆ.
ಸಾರಿಗೆ ಬಸ್​ ಲಕ್ಕುಂಡಿ ಮಾರ್ಗವಾಗಿ ಗದಗದಿಂದ ಕೊಪ್ಪಳ್ಳಕ್ಕೆ ಹೊರಟಿತ್ತು. ಕೊಪ್ಪಳದಿಂದ ಹುಬ್ಬಳಿಗೆ ಕಡೆಗೆ ಕಾರು ಹೊರಟಿತ್ತು ಎನ್ನಲಾಗಿದ್ದು, ಲಕ್ಕುಂಡಿ ಗ್ರಾಮದ ಬಳಿ ತಿರುವಿನಲ್ಲಿ ಈ ಟನೆ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್​ ರಸ್ತೆ ಪಕ್ಕಕ್ಕೆ ಉರುಳಿದ ಪರಿಣಾಮ ಬಸ್​ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗದಗ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net