ಕೋಟದಲ್ಲಿ ಟ್ಯಾಂಕರ್ ಪಲ್ಟಿ

tanker web
Published on

ಕೋಟ: ಇಲ್ಲಿನ ಮಣೂರು ಬಾಳೆಬೆಟ್ಟು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ಹೈಡ್ರೋಕ್ಲೋರಿಕ್ ಆ್ಯಸಿಡ್ ತುಂಬಿದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.

ಕಾರವಾರದಿಂದ ಕೊಚ್ಚಿ ಕಡೆಗೆ ಹೊರಟಿದ್ದ 23 ಟನ್ ಹೈಡ್ರೋಕ್ಲೋರಿಕ್ ಆ್ಯಸಿಡ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಕೋಟ ಗ್ರಾಪಂನ ಮಣೂರು ಬಾಳೆಬೆಟ್ಟು ಸಮೀಪ ಭಾನುವಾರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕ್ಕೆ ಡಿಕ್ಕಿ ಹೊಡೆದು, ಉರುಳಿಬಿದ್ದಿದೆ. ಚಾಲಕ ಮತ್ತು ಕ್ಲೀನರ್ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಸ್ಥಳಕ್ಕೆ ಕೋಟ ಆರಕ್ಷಕರು, ಅಗ್ನಿಶಾಮಕ ದಳದ ಸಿಬ್ಬಂದಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತೆರವುಗೊಳಿಸುವಲ್ಲಿ ಯಶಸ್ವಿಯಾದರು. ಕುಂದಾಪುರ ವಿಭಾಗದ ಅಗ್ನಿಶಾಮಕ ದಳದ ಪ್ರದೀಪ ನಾಯಕ್, ಸಂತೋಷ ಶೆಟ್ಟಿ, ಸುಂದರ್ ಬಿ., ನಾಗರಾಜ್ ಪೂಜಾರಿ, ಬಸವರಾಜ್ ಹಳ್ಳದ್ ಗೆಣ್ಣೂರ, ಗ್ರಹರಕ್ಷಕ ಆಕಾಶ್ ಕುಮಾರ್, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ., ನವಯುಗ ಕಂಪನಿಯ ಸಾಸ್ತಾನ ಟೋಲ್ ಸಿಬ್ಬಂದಿ ಯೋಗೀಶ್ ನಾಯಿರಿ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net