ಅಚ್ಚುಕಟ್ಟು ಜಾತ್ರೋತ್ಸವಕ್ಕೆ ಸಮಿತಿ ರಚನೆ

ವೀರಭದ್ರ ಸ್ವಾಮೀಜಿ
ವೀರಭದ್ರ ಸ್ವಾಮೀಜಿ
Published on

ಮುದಗಲ್: ಇದೇ 18 ರಿಂದ 20ರವರೆಗೆ ನಡೆಯಲಿರುವ ಅಂಕಲಿಮಠದ ನಿರುಪಾದೀಶ್ವರ ಜಾತ್ರೋತ್ಸವ ಅಚ್ಚುಕಟ್ಟು ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ಸದಸ್ಯರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶ್ರೀಮಠದ ಪೀಠಾಧಿಪತಿ ವೀರಭದ್ರ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ಅಡವೀಶ ನಿರುಪಾದೀಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಎಲ್ಲರೂ ಸೇರಿ ವಿಜೃಂಭಣೆಯಿಂದಜಾತ್ರೆ ಆಚರಿಸಬೇಕು. ಪ್ರತಿ ವರ್ಷದಂತೆ ಈ ಸಲ ಕೂಡ ಜಾತ್ರೆ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ, ಸಾಮೂಹಿಕ ವಿವಾಹ, ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಕಾರ್ಯಕ್ರಮಗಳ್ನು ಭಕ್ತ ಸಮೂಹ ಆಯೋಜಿಸಿದ್ದು, ಎಲ್ಲರೂ ಸಹಕಾರ ನೀಡಬೇಕೆಂದರು.

ತುರ್ವಿಹಾಳದ ಅಮರಗುಂಡ ದೇವರು, ಶ್ರೀ ಫಕೀರೇಶ್ವರ ಮಹಾಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ರುದ್ರಗೌಡ ತುರಡಗಿ, ಪ್ರಮುಖರಾದ ಮಹಾಂತೇಶ ಪಾಟೀಲ್, ನಾಗನಗೌಡ ತುರಡಗಿ, ವೆಂಕನಗೌಡ ವ್ಯಾಕರನಾಳ, ರಾಘವೇಂದ್ರ ಗುಮಾಸ್ತೆ, ಸೂಗಣ್ಣ ಬಾಳೇಕಾಯಿ, ದೇವಪ್ಪ ರಾಠೋಡ, ನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net