ದೇವರ ನಾಮಸ್ಮರಣೆಯಿಂದ ಇಷ್ಟಾರ್ಥ ಪ್ರಾಪ್ತಿ

21ARATAL1
Published on

ಅರಟಾಳ: ಭಕ್ತಿಯಿಂದ ದೇವರ ಸ್ಮರಣೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ. ಬದುಕಿನಲ್ಲಿ ಗೆಲುವು ತಂದುಕೊಡುವ ಏಕೈಕ ಮಾರ್ಗ ಅಧ್ಯಾತ್ಮ ಎಂದು ಪಂಢರಪುರ ವಿಶ್ವನಾಥ ರಾಶಿನಕರ ಮಹಾರಾಜರು ಹೇಳಿದರು.

ಗ್ರಾಮದ ವಿಠ್ಠಲ-ರುಕ್ಮೀಣಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದುಶ್ಚಟಕ್ಕೆ ದಾಸರಾಗದೆ, ದೇವರ ಸ್ಮರಣೆ ಮಾಡುವುದರಿಂದ ಜೀವನ ಮುಕ್ತಿ ದೊರೆಯುತ್ತದೆ. ದೇವರು ಜನ್ಮದ ಜತೆ ಸುಖ ಸಂಪತ್ತನ್ನು ಕೊಟ್ಟಿದ್ದಾನೆ. ಗುರುವಿನ ಸ್ಮರಣೆಯಿಂದ ಭವಕ್ಕೆ ಬಂದದ್ದು ಸಾರ್ಥಕ. ನಾನು ಎನ್ನುವ ಅಹಂ ಮರೆತು, ಎಲ್ಲರು ಒಂದೇ ಎನ್ನುವ ಭಾವ ಬಂದಾಗ ಸದ್ಗುರುವಿನ ದರ್ಶನ ಸಾಧ್ಯ ಎಂದರು.

ಡಾ.ವಿಲಾಸ ಜಂಬಗಿ ಮಾತನಾಡಿದರು. ಕೋಹಳ್ಳಿ ಸಂತ ಶಂಕರ ಮಹಾರಾಜರು ಕೀರ್ತನೆ ಹೇಳಿದರು. ತುಂಗಳ ದುಂಡಪ್ಪ ಮಹಾರಾಜ, ಶ್ರೀಕಾಂತ ಕೊರಿ, ಸಾವಳಗಿ ಪುಟ್ಟು ಮಹಾರಾಜ, ಅಪ್ಪು ಆಸಂಗಿ, ರಾಮಣ್ಣ ಪೂಜಾರಿ, ಕನ್ನಾಳ ಸಿದ್ರಾಮ ದಳವಾಯಿ, ಡಾ.ವಿ.ಎಂ.ಜಂಬಗಿ, ಹೂವಣ್ಣ ಹಿರೇಕುರಬರ, ಮಾಳಪ್ಪ ಅರ್ಜುಣಗಿ, ಮುದಕಪ್ಪ ಗಿರಗಾಂವಿ. ಕೆಂಚಪ್ಪ ಜಂಬಗಿ, ಪೀರಪ್ಪ ಕೊಕಟನೂರ, ಸದಾಶಿವ ಪಡತಾರೆ, ಅಶೋಕ ಪೂಜಾರಿ, ಮಹಾದೇವ ಹಟ್ಟಿ, ರಮೇಶ ಗೊರವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net