

ಗಜೇಂದ್ರಗಡ: ಬಸವ ಪುರಾಣದ ಅಂಗವಾಗಿ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರಿಂದ ಪಟ್ಟಣದ 6ನೇ ವಾರ್ಡ್ನಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಿತು.
ಪಟ್ಟಣದ ಶ್ರೀ ಕಟ್ಟಿಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಕಟ್ಟಿ ಬಸವೇಶ್ವರ ದೇವಸ್ಥಾನ ತಲುಪಿ ಧರ್ಮಸಭೆಯಾಗಿ ಮಾರ್ಪಟ್ಟಿತು.
ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ‘ಪಟ್ಟಣವು ಭಾವೈಕ್ಯ ಕೇಂದ್ರವಾಗಿದ್ದು ಇಲ್ಲಿ 18 ಬಾವಿ, 18 ಮಠ ಹಾಗೂ 18 ಮಸೀದಿಗಳಿವೆ. ಇಲ್ಲಿನ ಸಹೋದರತ್ವ ಮನೋಭಾವ ಇಡೀ ದೇಶಕ್ಕೆ ಮಾದರಿಯಾಗಿದೆ. ಬಸವ ಪುರಾಣ ಆಲಿಸುವುದರಿಂದ ಮಾನಸಿಕ ನೆಮ್ಮದಿಯೊಂದಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದರು.
ಅನ್ನದಾನ ಶಾಸ್ತ್ರಿ, ಯು.ಆರ್. ಚನ್ನಮ್ಮನವರ, ಶಿವರಾಜ ಘೊರ್ಪಡೆ, ರಾಜು ಸಾಂಗ್ಲಿಕರ, ಪ್ರಭು ಚವಡಿ, ಸಿದ್ದಪ್ಪ ಬಂಡಿ, ಚಂದ್ರಯ್ಯ ಗೌರಿಮಠ, ಬಸವರಾಜ ಕೊಟಗಿ, ಪ್ರಕಾಶ ಬಳಿಗೇರ, ಅಮರಯ್ಯ ಗೌರಿಮಠ, ನಾಗಯ್ಯ ಗೊಂಗಡಶೆಟ್ಟಿಮಠ, ಚಿದಾನಂದಪ್ಪ ಹಡಪದ, ಗಂಗಪ್ಪ ಕೊಡೆಕಲ್ಲ, ಕಳಕಪ್ಪ ಮಡಿವಾಳರ, ಸುರೇಶ ಮರದ, ಬಾಬು ದಿವಟರ, ಅಮರೇಶ ಚವಡಿ, ರವಿ ವಡಗೇರಿ, ಪ್ರದೀಪ ಗೊಂಗಡಶೆಟ್ಟಿಮಠ, ಚಂದ್ರು ಆಲಾಪುರ, ಇತರರಿದ್ದರು.