ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಯಾವುದೇ ಕಾರ್ಯವನ್ನು ಮಾಡಿದರೂ ಶ್ರದ್ಧೆಯಿಂದ ಮಾಡಬೇಕು. ಶ್ರದ್ಧೆ ಇದ್ದರೆ ಮಾತ್ರ ಸಿದ್ದಿ ಸಾಧ್ಯವಾಗುತ್ತದೆ ಎಂದು ಆರತಿಪುರ (ಮಂಡ್ಯ) ಜೈನ ಮಠದ ಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮಿಗಳು ಹೇಳಿದರು.
ಇಲ್ಲಿಯ ಶಾಂತಿನಾಥ ಭವನದಲ್ಲಿ ದಿಗಂಬರ ಜೈನ ಸಮಾಜದ ವತಿಯಿಂದ ನಡೆಯುತ್ತಿರುವ ದಶಲಕ್ಷಣ ಪೂಜಾ ವಿಧಾನದ ನಾಲ್ಕನೆಯ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪ್ರವಚನ ನೀಡಿದರು.
ಧಾರ್ವಿುಕ ಕಾರ್ಯವನ್ನು ಮಾಡಿದರೂ ಅದರಲ್ಲಿ ಶ್ರದ್ಧೆ ಇರಬೇಕು. ಪೂಜೆ, ಆರಾಧನೆಗಳು ಶ್ರದ್ದೆಯಿಂದ ಮಾಡಲ್ಪಟ್ಟಾಗ ಮನುಷ್ಯ ಜೀವನದ ನೈತಿಕ ಸ್ತರ ವೃದ್ಧಿಯಾಗುತ್ತದೆ. ಇದು ವೈಯಕ್ತಿಕ ಜೀವನದಲ್ಲಿಯೂ, ಸಮಾಜದಲ್ಲಿಯೂ ಶಾಂತಿ, ಸದ್ಭಾವನೆಗಳನ್ನು ಹುಟ್ಟುಹಾಕುತ್ತದೆ ಎಂದರು.
ನೂರಾರು ಜೈನ ಶ್ರಾವಕ ಶ್ರಾವಕಿಯರು ಭಾಗಿಯಾಗಿದ್ದರು.