ಧರ್ಮ ಕಾರ್ಯದಿಂದ ನೆಮ್ಮದಿ ಪ್ರಾಪ್ತಿ

17 ಎಸ್ಕೆಪಿ 1k
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಸಮಿತಿಯಿಂದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಪುನೀತ್ ಗೌಳಿ, ವಿಜಯಕುಮಾರ್ ನಾಡಿಗೇರ್, ನಾಗೇಂದ್ರ ಜಿಂಗಾಡೆ, ಮಲ್ಲೇಶಪ್ಪ ಸುಣಗಾರ್ ಇತರರಿದ್ದರು.
Published on

ಶಿಕಾರಿಪುರ: ಶಿಬಾರಗಳೆಂದರೆ ಶಿವನ ಸಾನ್ನಿಧ್ಯದ ಪ್ರತಿರೂಪ. ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರನನ್ನು ಶಿಬಾರಗಳಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ನಾಡಿನಾದ್ಯಂತ ಶ್ರೀ ಮೈಲಾರಲಿಂಗ ಸ್ವಾಮಿಯ ಭಕ್ತರಿದ್ದಾರೆ ಎಂದು ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ತೊಗರ್ಸಿಯಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಬಾರ ಸಮಿತಿಯು 34ನೇ ವರ್ಷದ ಶಿಬಾರೋತ್ಸವ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಸಿ ಆಶೀರ್ವಚನ ನೀಡಿದ ಶ್ರೀಗಳು, ತೊಗರ್ಸಿಯಲ್ಲಿ ಮೂರೂವರೆ ದಶಕಗಳ ಹಿಂದೆ ಮೈಲಾರಲಿಂಗೇಶ್ವರ ಶಿಬಾರ ಸ್ಥಾಪನೆ ಮಾಡಲಾಗಿದೆ. ಸಮಿತಿಯವರು ಸಾಂಪ್ರದಾಯಿಕವಾಗಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಧರ್ಮ ಕಾರ್ಯ ಮಾಡುವವರು ಸದಾ ಸಂತೋಷ, ನೆಮ್ಮದಿಯಿಂದ ಇರುತ್ತಾರೆ. ರಾಗದ್ವೇಷಗಳಿಂದ ಮನಸ್ಸು ಹಾಳಾಗುತ್ತದೆ. ಶ್ರೀ ಮಳೆ ಹಿರೇಮಠದಿಂದ ಶಿಬಾರ ನಿರ್ಮಿಸಲು ಮೈಲಾರಲಿಂಗೇಶ್ವರ ಸ್ವಾಮಿ ಸಮಿತಿಗೆ ಸ್ಥಳ ನೀಡಲಾಗಿದೆ. ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಯ ಆರಾಧನೆ ಮತ್ತು ಸೇವೆ ಅತ್ಯಂತ ವಿಶಿಷ್ಟ ವಾಗಿವೆ ಎಂದು ಹೇಳಿದರು.
ಸಮಿತಿಯ ಪುನೀತ್ ಗೌಳಿ, ಪ್ರಧಾನ ಅರ್ಚಕ ವಿಜಯಕುಮಾರ್ ನಾಡಿಗೇರ್, ಪ್ರಮುಖರಾದ ನಾಗೇಂದ್ರ ಜಿಂಗಾಡೆ, ಮಲ್ಲೇಶಪ್ಪ ಸುಣಗಾರ್, ಅನಿಲ್ ಗೌಳಿ, ನಾಗರಾಜ್, ಪ್ರಕಾಶ್, ಉಮೇಶ್ ಗೌಳಿ, ಅನಿಲ್, ಶಿವಣ್ಣ, ಮುತ್ತು ಇತರರಿದ್ದರು. ಅರ್ಚಕ ಸತ್ಯನಾರಾಯಣ ರಾವ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net