ಭಜನೆಯಿಂದ ಉತ್ತಮ ಫಲ ಪ್ರಾಪ್ತಿ

Published on

ಬ್ರಹ್ಮಾವರ: ಪ್ರತಿ ದಿನ ಮಾಡುವ ಭಜನೆಯಿಂದ ಉತ್ತಮ ಫಲದೊಂದಿಗೆ ಮನೆ, ಮನವನ್ನು ಬದಲಾವಣೆಯಾಗುತ್ತದೆ ಎಂದು ಬ್ರಹ್ಮಾವರ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ರಾಘವೇಂದ್ರ ರಾವ್ ಹೇಳಿದರು.

ಬಂಡೀಮಠ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಹನೇಹಳ್ಳಿ ಕಾರ್ಯಕ್ಷೇತ್ರದ ಶ್ರೀ ಶಾರದಾಂಬೆ ಜ್ಞಾನವಿಕಾಸ ಕೇಂದ್ರದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಪತ್ರಕರ್ತ ಬಂಡೀಮಠ ಶಿವರಾಂ ಆಚಾರ್ಯ ವಾತನಾಡಿದರು. ಬಾರ್ಕೂರು ವಲಯದ ಒಕ್ಕೂಟ ಅಧ್ಯಕ್ಷ ಚಂದ್ರ ಮರಕಾಲ, ಬಂಡೀಮಠ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯ ಶೇಖರ್ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ, ಒಕ್ಕೂಟ ಅಧ್ಯಕ್ಷೆ ಜ್ಯೋತಿ ಮತ್ತು ಸಂಪ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಚೈತ್ರಾ ಸಾಧನ ವರದಿ ವಾಚಿಸಿದರು. ಸಂಯೋಜಕಿ ಸುಶೀಲಾ ಸ್ವಾಗತಿಸಿದರು. ವಸಂತಿ ವಂದಿಸಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪುಷ್ಪಲತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net