ಸತತ ಅಧ್ಯಯನದಿಂದ ಗುರಿ ಸಾಧನೆ: ಸಿಇಎಸ್ ವಿದ್ಯಾಸಂಸ್ಥೆಯ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

STUDENT FAREWELL PROGRAMME IN HIREKERUR
Published on

ಹಿರೇಕೆರೂರ: ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗೆ ಅನುಗುಣವಾಗಿ ಅಧ್ಯಯನದಲ್ಲಿ ತೊಡಗಿ ತಮ್ಮ ಗುರಿ ಸಾಧಿಸಬೇಕು ಎಂದು ಸಿಇಎಸ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಹೇಳಿದರು.

ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ವತಿಯಿಂದ ನಡೆಯುತ್ತಿರುವ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಎಂ.ಕಾಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಎಸ್.ಎಸ್.ಪಾಟೀಲ ಸಂಶೋಧನಾ (ಪಿಎಚ್.ಡಿ) ಕೇಂದ್ರದ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಧ್ಯಾಪಕಿ ಹೇಮಲತಾ ಕೆ., ಡಾ.ರಜಿತ್​ಕುಮಾರ್ ಹೆಚ್.ಬಿ., ಮಾತನಾಡಿದರು. ಎಸ್.ಬಿ. ತಿಪ್ಪಣ್ಣನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಾದ ಶೀತಲ್ ಗುಜ್ಜರ, ಚೈತ್ರಾ ವಡ್ಡಿನಕಟ್ಟಿ ಅವರಿಗೆ ಸನ್ಮಾನಿಸಲಾಯಿತು.

ನಾಗರಾಜ ಎಚ್ ಪಿ., ಸಿ.ಆರ್. ದೂದಿಹಳ್ಳಿ, ಪಿ.ಎಂ. ವಿಜಯಕುಮಾರ, ಕಿರಣ ಬಾಗಲರ, ನವೀನ ಯಲಿಗಾರ, ಲಕ್ಷ್ಮಣ ಗೌಡಗೇರಿ, ಚಂದ್ರಗೌಡ ಆರ್., ಸಂತೋಷ ಬಣಕಾರ, ವಿರೂಪಾಕ್ಷಪ್ಪ ಎಸ್.ಕೆ., ಕವಿತಾ ಅಣಜಿ, ಲತಾ ಬಿ.ವೈ., ತ್ರಿವೇಣಿ ಕೋರಿ, ಪವಮಾನ ಎಂ., ಪ್ರವೀಣ ಕೂರಗೇರ ಇದ್ದರು.

ಪ್ರಾಂಶುಪಾಲ ಡಾ.ಎಸ್.ಬಿ ಚನ್ನಗೌಡ್ರ, ಎಸ್.ಎಸ್.ಹುಲ್ಲಿನಕೊಪ್ಪ, ತೇಜಸ್ವಿನಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net