ಅಽಕಮಾಸದಲ್ಲಿ ದ್ವಿಗುಣ ಫಲ ಪ್ರಾಪ್ತಿ

17sor2
ಕಾನುಕೇರಿ ಮಠದಲ್ಲಿ ಹಮ್ಮಿಕೊಂಡಿದ್ದ ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ನಾಗರಾಜ ಅವರನ್ನು ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.
Published on

ಸೊರಬ: ಒಂದು ವರ್ಷದಲ್ಲಿ ಹದಿಮೂರು ಮಾಸಗಳು ಬಂದರೆ ಅಽಕ ವರ್ಷ ಎನ್ನುತ್ತವೆ. ಇಂತಹ ಮಾಸಗಳಲ್ಲಿ ಮಾಡುವ ಕಾರ್ಯಗಳಿಂದ ದ್ವಿಗುಣ ಫಲ ಪ್ರಾಪ್ತಿಯಾಗುತ್ತದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸೋಮವಾರ ಪಟ್ಟಣದ ಕಾನುಕೇರಿ ಮಠದಲ್ಲಿ ಹಮ್ಮಿಕೊಂಡಿದ್ದ ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ, ಪುಣ್ಯ ಕಾರ್ಯಗಳನ್ನು ಮಾಡುವುದಕ್ಕೆ ಶಾಸ್ತçಗಳಲ್ಲಿ ಅಽಕಮಾಸವನ್ನು ಮೀಸಲಿಡಲಾಗಿದೆ. ಯಾವುದೇ ಸಂಕಟಗಳಿದ್ದರೂ ಈ ಮಾಸದಲ್ಲಿ ಮಾಡುವ ಪುಣ್ಯ ಕಾರ್ಯಗಳಿಂದ ನಾಶವಾಗುತ್ತವೆ. ಆದ್ದರಿಂದ ಈ ಮಾಸದಲ್ಲಿ ಪೂಜೆ, ದಾನ, ಧರ್ಮ, ಜಪ ಮುಂತಾದ ಪುಣ್ಯ ಕೆಲಸಗಳನ್ನು ಮಾಡಬೇಕು ಎಂದರು.
ಜಗತ್ತಿನ ಸೃಷ್ಟಿಗೆ ಕಾರಣ ದೇವರು. ಆತ ಮಾತ್ರ ದೊಡ್ಡವನು. ಆತ ಸರ್ವ ಶಕ್ತ, ಸರ್ವ ಕತೃ. ಮನುಷ್ಯ ತನ್ನ ಅಭಿವೃದ್ಧಿಗೆ ತಾನೇ ಕಾರಣ ಎಂದುಕೊಳ್ಳುತ್ತಾನೆ. ಆದರೆ ಭಗವಂತನ ಸಂಕಲ್ಪವಿಲ್ಲದಿದ್ದರೆ ಯಾವ ಕೆಲಸವೂ ಆಗದು. ಮನುಷ್ಯನ ಸಂಕೀರ್ಣ ಮನಸ್ಥಿತಿಗೆ ಆತನೊಳಗಿನ ಅಹಂಕಾರ ಮತ್ತು ಮಮಕಾರಗಳೇ ಕಾರಣ. ಇವು ಮನುಷ್ಯನನ್ನು ಸಂಸಾರದಲ್ಲಿ ಬಂಽಸಲ್ಪಡುತ್ತವೆ ಎಂದರು.
ನಾನು ಮತ್ತು ನನ್ನದು ಎಂಬ ಭಾವ ಬಂದರೆ ಮನುಷ್ಯನ ಅಧಃಪತನಕ್ಕೆ ಕಾರಣವಾಗುತ್ತದೆ. ಇದನ್ನು ಮನುಷ್ಯ ನಿವಾರಿಸಿಕೊಳ್ಳಬೇಕು. ಅದಕ್ಕಾಗಿ ಶಿವಾನುಭವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸತ್ಸಂಗಗಳಲ್ಲಿ ತೊಡಗಿಸಿಕೊಳ್ಳಬೇಕು. ಅಽಕಮಾಸವು ಎಲ್ಲರಿಗೂ ಅಽಕ ಪುಣ್ಯ ತಂದುಕೊಡಲಿ. ಎಲ್ಲರ ಸಂಕಲ್ಪಗಳು ಪರಿಹಾರವಾಗಲಿ ಎಂದು ಆಶೀರ್ವದಿಸಿದರು.
ಶ್ರೀ ನಿಜಗುಣ ಚಂದ್ರಶೇಖರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕನಬಳಗದ ಸದಸ್ಯರಿಂದ ಭಜನೆ ಕಾರ್ಯಕ್ರ ನಡೆಯಿತು. ರೋಟರಿ ಸಂಸ್ಥೆಯ ಅಧ್ಯಕ್ಷ ಡಾ ನಾಗರಾಜ, ಲಕ್ಷಿ÷್ಮÃಕಾಂತ, ಜನಸಂಗ್ರಾಮ ಪರಿಷತ್ ಅಧ್ಯಕ್ಷ ಶಂಕರ ಶೇಟ್, ಜಯಮಾಲಾ ಅಣ್ಣಾಜಿಗೌಡ, ನಾಗರಾಜ ಗುತ್ತಿ, ಗಂಗಾಧರ, ವಿಶ್ವನಾಥ ಗೌಡ, ಮಂಜಣ್ಣ ಹೊಸಕೊಪ್ಪ, ರೇಖಮ್ಮ, ಚಿನ್ನಮ್ಮ, ರೇವತಿ, ಸುನಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net