ಯೋಗದಿಂದ ಸದೃಢ ದೇಹ, ಆರೋಗ್ಯ ಪ್ರಾಪ್ತಿ

yoga
ಯೋಗ ದಿನಾಚರಣೆ ಅಂಗವಾಗಿ ಉಪ್ಪಿನಬೆಟಗೇರಿ ಎಸ್.ಜಿ.ವಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಪತಂಜಲಿ ಯೋಗ ಸಮೀತಿಯ ಜಿಲ್ಲಾ ಪ್ರಭಾರಿ ರಮೇಶ ಸುಲಕೆ ಅವರು ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
Published on

ಉಪ್ಪಿನ ಬೆಟಗೇರಿ: ಪ್ರತಿದಿನ ಯೋಗ ಮೈಗೂಡಿಸಿಕೊಳ್ಳುವುದರಿಂದ ಆರೋಗ್ಯದ ಜತೆಗೆ, ಶರೀರವನ್ನು ಸಧೃಢವಾಗಿಟ್ಟುಕೊಳ್ಳಬಹುದು ಎಂದು ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ರಮೇಶ ಸುಲಕೆ ಹೇಳಿದರು.

ಯೋಗ ದಿನಾಚರಣೆ ಅಂಗವಾಗಿ ಗ್ರಾಮದ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ಪತಂಜಲಿ ಯೋಗ ಸಮೀತಿ ಏರ್ಪಡಿಸಿದ್ದ ಶಿಬಿರದಲ್ಲಿ ಅವರು ಮಾತನಾಡಿದರು.

ಯೋಗ ಸನಾತನ ಸಂಸ್ಕೃತಿಯ ಪ್ರತೀಕವಾಗಿದ್ದು, ಹಿಂದಿನ ಕಾಲದ ಋಷಿಮುನಿಗಳು ತಮ್ಮ ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರ ಬಳಿ ಹೋಗದೆ, ಅದಕ್ಕೆ ಬೇಕಾದ ಪರಿಹಾರವನ್ನು ಯೋಗದಲ್ಲಿ ಕಂಡುಕೊಳ್ಳುತ್ತಿದ್ದರು. ಹೀಗಾಗಿ ಅವರು ರೋಗಮುಕ್ತ ಜೀವನ ನಡೆಸಿ ನೂರಾರು ವರ್ಷ ಬದುಕುತ್ತಿದ್ದರು. ಆದ್ದರಿಂದ ಪ್ರತಿಯೊಬ್ಬರು ತಮ್ಮ ದೈನಂದಿನ ಕೆಲಸಗಳ ಒತ್ತಡ ನಿವಾರಣೆಗೆ ಪ್ರತಿನಿತ್ಯ ಬೆಳಗಿನ ಒಂದು ಗಂಟೆ ಯೋಗಕ್ಕಾಗಿ ಮೀಸಲಿಡಬೇಕು ಎಂದರು.
ಆಯೋಜಕ ಶಿವಾನಂದ ದೇಶನೂರ ಮಾತನಾಡಿ, ಯೋಗ ಶಿಬಿರದ ಸದುಪಯೋಗ ಪಡೆದುಕೊಂಡ ಸಾಕಷ್ಟು ಜನರು ಡಯಾಬಿಟಿಸ್, ಮಧುಮೇಹ, ಬಿಪಿ ಸೇರಿದಂತೆ ಇತರೆ ರೋಗಗಳ ನಿಯಂತ್ರಣ ಮಾಡಿಕೊಂಡಿದ್ದಾರೆ ಎಂದರು.

ಬಸವರಾಜ ಮಮ್ಮಿಗಟ್ಟಿ, ವಿದ್ಯಾ ಹಜಾರೆ, ರತ್ನಾ ಜಾವೂರ, ಶಂಕರ ಓರಣಕರ, ಶಿವಾನಂದ ದೇಶನೂರ, ಮಂಜುನಾಥ ಶಿರೂರು, ನಾರಾಯಣ ಲೋಲಿ, ರಮೇಶ ಮಡ್ಡಿಕಾರ, ರಮೇಶ ಮಡಿವಾಳರ, ಅಣ್ಣಪ್ಪ ನೀಲವಾಣಿ, ಈಶ್ವರ ಅರಳಿಕಟ್ಟಿ, ಮಹಾಂತೇಶ ಚಿಕ್ಕಮಠ, ಸುಧಾಕರ ದೊಡಮನಿ, ಸಂಜಯ ಯಲಿಗಾರ, ಉಮೇಶ ಪಾಗದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net