ಲಾವಣ್ಯ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಸನ್ಮಾನ

4
Published on

ಬೈಂದೂರು: ಲಾವಣ್ಯ ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ -2025ರ ರಂಗೋತ್ಸವದ ಎರಡನೇ ದಿನ ಗಾಯಕಿ ಮೇಘನಾ ಕುಂದಾಪುರ, ಯಕ್ಷಗಾನ ಭಾಗವತ ಕೃಷ್ಣಯ್ಯ ಬೈಂದೂರು, ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು. ಡಾ.ರೂಪಶ್ರೀ ಮರವಂತೆ, ಜಯಾನಂದ ಹೋಬಳಿದಾರ್, ಶೇಖರ ಪೂಜಾರಿ, ಎನ್.ಜಗನ್ನಾಥ ಶೆಟ್ಟಿ, ಸದಾಶಿವ ಡಿ.ಪಡುವರಿ, ರಾಜು ಮೊಗವೀರ, ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ, ಪೂರ್ವಾಧ್ಯಕ್ಷ ಹರೇಗೋಡು ಉದಯ್ ಆಚಾರ್ಯ ಇದ್ದರು. ಲಾವಣ್ಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕಲಾವಿದರಿಂದ ಕೃಷ್ಣಲೀಲೆ-ಕಂಸವಧೆ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net