ಬಂಟರ ಸಮಾವೇಶದಲ್ಲಿ ಸಾಧಕರಿಗೆ ಸನ್ಮಾನ

03
Published on

ಕಡಬ: ಆಲಂಕಾರು ವಲಯ ಬಂಟರ ಸಂಘ ಮತ್ತು ಯುವ ಬಂಟರ ಸಂಘ ಆಲಂಕಾರು ವಲಯ ಆಶ್ರಯದಲ್ಲಿ ಆಟಿದ ಕೂಟ, ಬಂಟರ ಸಮಾವೇಶ, ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರದಾನ, ಗ್ರಾಮೀಣ ಒಳಾಂಗಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಲಂಕಾರು ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಮಾಜಿ ಶಾಸಕಿ ಶಕುಂತಳಾ ಟಿ. ಕಾರ್ಯಕ್ರಮ ಉದ್ಘಾಟಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದುರ್ಗಾಪ್ರಸಾದ್ ರೈ ಶುಭಹಾರೈಸಿದರು. ಆಲಂಕಾರು ವಲಯ ಬಂಟರ ಸಂಘ ಅಧ್ಯಕ್ಷ ಸೇಸಪ್ಪ ರೈ ಕೆ. ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ, ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿಯನ್ನು ಮನವಳಿಕೆ ದಾಸಪ್ಪ ರೈ ಅವರ ಪುತ್ರ ವಿಜಯ ರೈ ಮನವಳಿಕೆ ಅವರಿಗೆ ಪ್ರದಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಮಾನಿಷಾ ಶೆಟ್ಟಿ ಅಂಬರಾಜೆ ಅವರನ್ನು ಸನ್ಮಾನಿಸಲಾಯಿತು.

ಬೆಳ್ತಂಗಡಿ ತಾಲೂಕು ಬಂಟರ ಸಂಘ ಮಾಜಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಬಾಲಚಂದ್ರ ಶೆಟ್ಟಿ ನೀರಾಜೆ, ಪುತ್ತೂರು ಸಮಿತಿ ನಿರ್ದೇಶಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕು ಬಂಟರ ಸಂಘ ನಿರ್ದೇಶಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ಸುಭಾಸ್ ಶೆಟ್ಟಿ ಆರುವಾರ, ಇಂದುಶೇಖರ ಶೆಟ್ಟಿ ಕುಕ್ಕೇರಿ, ಆಲಂಕಾರು ವಲಯ ಬಂಟರ ಸಂಘ ಉಪಾಧ್ಯಕ್ಷ ರಾಮಮೋಹನ ರೈ ಸುರುಳಿ ಉಪಸ್ಥಿತರಿದ್ದರು.

ಆಲಂಕಾರು ವಲಯ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ಸ್ವಾಗತಿಸಿದರು. ಕೋಶಾಧಿಕಾರಿ ಲೋಕನಾಥ ರೈ ರಾಮಕುಂಜ ನಿರೂಪಿಸಿದರು. ಯುವ ಬಂಟರ ಸಂಘದ ಅಧ್ಯಕ್ಷ ಗುರುಕಿರಣ್ ಶೆಟ್ಟಿ ಬಾಲಾಜೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net