

ಪುತ್ತೂರು ಗ್ರಾಮಾಂತರ: ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವಿ ಪೂರ್ವ ಕಾಲೇಜು ವಿಭಾಗದ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಭಿತ್ತಿಪತ್ರಿಕೆ ಅನಾವರಣ, ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ವಿದ್ಯಾಸಂಸ್ಥೆ ಪ್ರಾಂಶುಪಾಲೆ ಹಸೀನಾ ಬಾನು ಎಸ್.ಇ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕಿ ಸುನಂದಾ ವಿ.ಕೆ. ಕಾರ್ಯಕ್ರಮ ಉದ್ಘಾಟಿಸಿ, ‘ಸಾಧನಾ’ ಭಿತ್ತಿಪತ್ರಿಕೆಯ ಮೊದಲ ಸಂಚಿಕೆಯನ್ನು ಅನಾವರಣಗೊಳಿಸಿದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಅವರು ವಿದ್ಯಾರ್ಥಿ-ಸಾಧನೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಉಪನ್ಯಾಸಕ ಆನಂದ ಎನ್. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಸುನಂದಾ ವಿ.ಕೆ. ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕೆಪಿಎಸ್ ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್., ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗ ಮುಖ್ಯ ಶಿಕ್ಷಕ ಬಾಬು ಎಂ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಮಿಕ್ದಾದ್ ಕೆ.ಇ., ಕಾರ್ಯದರ್ಶಿ ಆಯಿಷತ್ ಅಫ್ಸೀನಾ ಉಪಸ್ಥಿತರಿದ್ದರು. ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಸ್ವಾಗತಿಸಿದರು. ಉಪನ್ಯಾಸಕ ಇಸ್ಮಾಯಿಲ್ ಪಿ. ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಶ್ವೇತಾ ನೆಟ್ಟಾರು ವಂದಿಸಿದರು. ಉಪನ್ಯಾಸಕಿಯರಾದ ಉಮಾಶಂಕರಿ ಎಸ್.ಕೆ., ಗುಣಶೀಲ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಗೌರವ
ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಲಿಖಿತಾ ರೈ, ಆಯಿಷತ್ ಫರ್ಜಾನಾ, ಸುಪ್ರೀತಾ, ಫಾತಿಮತ್ ಸಫೀದಾ, ಪವನ್ ಕುಮಾರ್ ರೈ, ಲಿಖಿತಾ ಪಿ., ಸೌಭಾಗ್ಯಶ್ರೀ, ಅಪೂರ್ವಾ ಎ., ಫಾತಿಮತ್ ತಸ್ಲೀಮಾ ಹಾಗೂ ಉತ್ತಮ ಅಂಕಗಳನ್ನು ಪಡೆದ ಮರಿಯಮ್ಮತ್ ರುಮೈಸಾ, ಶಿವಲ್ಯಾ ಕೆ., ಅಸ್ಮಾ, ಫಾತಿಮತ್ ತಸ್ಫಿಯಾ ಅವರನ್ನು ಸನ್ಮಾನಿಸಲಾಯಿತು. ಫಾತಿಮತ್ ತಸ್ಫಿಯಾ ಅನಿಸಿಕೆ ಹಂಚಿಕೊಂಡರು.