

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗೋಪಾಲ ಬಾಗಲಕೋಟ (ಶೇ.86.8), ಚಿತ್ರಾ ಕುಂಬಾರ (84), ಭಾಗ್ಯಲಕ್ಷ್ಮೀ ಕುಲಕರ್ಣಿ (84), ದೀಪಕ ದೊಡ್ಡಮನಿ (80.64), ಅಂಜಲಿ ಬಂಡಿವಾಡ (79.52), ದಿವ್ಯಾ ಕಲಾಲ (77.92), ರಾಧಿಕಾ ಕಾನಾನಾ (76.08), ವೇದಾ ಪೂಜಾರ (75.36), ಯಾಸ್ಮೀನ ದೇದಾರ (74.04), ಶಿವಾನಂದ ಅಂಚಟಗೇರಿ (72) ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಶಾಲಾ ಆಡಳಿತ ಮಂಡಳಿ ಗುರುದೇವ ವಿದ್ಯಾ ಸಮಿತಿ ಅಧ್ಯಕ್ಷ ಎಸ್. ಡಿ. ಮಧೂರಕರ, ಉಪಾಧ್ಯಕ್ಷ ಮೋಹನ ಗೌಡರ, ಕೋಶಾಧ್ಯಕ್ಷ ದಶರಥ ವಾಲಿ, ಕಾರ್ಯದರ್ಶಿ ನಂದಕುಮಾರ ಘೋಡಕೆ ಹಾಗೂ ಸದಸ್ಯರು, ಮುಖ್ಯೋಪಾಧ್ಯಾಯ ಎಲ್. ಎಸ್. ಹೊಸಮನಿ, ಶಿಕ್ಷಕರು ಅಭಿನಂದಿಸಿದ್ದಾರೆ.