ಕರಾಟೆಯಲ್ಲಿ ಸಹನಾ ಶಾಲೆ ಮಕ್ಕಳ ಸಾಧನೆ

oplus_4456448
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಲ್ಕನೇ ಸೌತ್ ಇಂಡಿಯಾ ಜೊನಲ್ ಕರಾಟೆ ಚಾಂಪಿಯನ್ಶಿಪ್-2025 ರಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ಸಹನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಭ್ರತ್ವ ಕಣ್ವ ಮತ್ತು ಅನುಶ್ರೀ ಅವರನನ್ನು ನಂಜುಂಡಸ್ವಾಮಿ ಸನ್ಮಾನಿಸಿದರು. ಎನ್.ನಂಜುಂಡಸ್ವಾಮಿ, ಕೆ.ಪುನೀತ ವಲ್ಲಿ, ವಾಣಿ, ನಂಜುಂಡಸ್ವಾಮಿ ಇದ್ದರು.
Published on

ಕೊಳ್ಳೇಗಾಲ : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಲ್ಕನೇ ಸೌತ್ ಇಂಡಿಯಾ ಒಟನಲ್ ಕರಾಟೆ ಚಾಂಪಿಯನ್‌ಶಿಪ್-2025 ರಲ್ಲಿ ಭಾಗವಹಿಸಿದ್ದ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದ ಸಹನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಮಂಗಳವಾರ ಸಂಸ್ಥೆಯ ಕಾರ್ಯದರ್ಶಿ ಎನ್. ನಂಜುಂಡಸ್ವಾಮಿ ಅಭಿನಂದಿಸಿದರು.

ಜಿಲ್ಲೆಯ 6 ವಿದ್ಯಾರ್ಥಿಗಳು 14 ವಷರ್ ಒಳಗಿನ ವಯೋಮಿತಿಯಲ್ಲಿ ಭಾಗವಹಿಸಿ 4 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕ ಗೆಲ್ಲುವುದರ ಮೂಲಕ 10 ಬಹುಮಾನಗಳನ್ನು ಗೆದ್ದಿದ್ದಾರೆ. ಇವರಲ್ಲಿ ನಮ್ಮ ಸಹನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಭ್ರತ್ವ ಕಣ್ವ 1 ಚಿನ್ನ ಮತ್ತು 1 ಬೆಳ್ಳಿ, ಅನುಶ್ರೀ 1 ಚಿನ್ನ ಮತ್ತು 1 ಬೆಳ್ಳಿ ಗೆದ್ದಿರುವುದು ನಮ್ಮ ಹೆಮ್ಮೆಯಾಗಿದೆ ಎಂದು ನಂಜುಂಡಸ್ವಾಮಿ ತಿಳಿಸಿದರು.

ಈ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳ್ ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ 1000 ಕ್ಕು ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದು ನಮ್ಮ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದಿರುವುದು ಸಂತೋಷದ ವಿಚಾರ. ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕರಾಟೆ ಕಲೆ ಅತ್ಯವಶ್ಯಕವಾಗಿದೆ. ಪಾಲಕರು ಇಂತಹ ಆತ್ಮ ರಕ್ಷಣೆಯ ಕಲೆಯನ್ನು ಮಕ್ಕಳಿಗೆ ಕಲಿಸಬೇಕೆಂದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಎನ್.ನಂಜುಂಡಸ್ವಾಮಿ, ಮುಖ್ಯ ಶಿಕ್ಷಕ ಕೆ.ಪುನೀತ ವಲ್ಲಿ, ಆಡಳಿತಾಧಿಕಾರಿ ವಾಣಿ, ಶಾಲಾ ಶಿಕ್ಷಕ ವೃಂದ ಮತ್ತು ಕರಾಟೆ ತರಬೇತುದಾರ ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net